ಉಳಿದು ಹೋಯಿತೆ ಸಾವಿರ ಮಾತುಗಳು

– ಸುರಬಿ ಲತಾ.

ಸಾವಿರ ಬಾವನೆಗಳು
ಹಂಚಿಕೊಳ್ಳಲು ಬಾಕಿ ಇತ್ತು

ಸಾವಿರ ಪ್ರೀತಿಯ ಮಾತುಗಳು
ಆಡಬೇಕಿತ್ತು

ಇಬ್ಬರಲೂ ಕಾತರವಿತ್ತು
ಕಣ್ಣುಗಳು ಬೆರೆತಾಗಿತ್ತು

ಮಾತುಗಳಲಿ ಆಡಬೇಕೆಂದಿದ್ದ
ಸಾವಿರ ಪದಗಳು ಮಾಯವಾಗಿತ್ತು

ಕಣ್ಣಲ್ಲೇ ನೀ ಹೇಳಿದ್ದೆ
ಕಣ್ಣಲ್ಲೇ ನಾ ಓದಿದ್ದೆ

ಆನಂದದಿ ಮುಗುಳು ನಗೆಯೊಂದೇ
ಅದರಗಳಲ್ಲಿ ಉಳಿದು ಹೋಯಿತೆ

(ಚಿತ್ರ ಸೆಲೆ: araspot.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: