ಹಂಗಿಲ್ಲ ನಂಗ್ಯಾರದು ಹದಿನೆಂಟಾಯಿತು ಅಂತ..

– ಸದಾನಂದ.ಬ.ಸಕ್ಕರಶೆಟ್ಟಿ.

introspect

1. ಹಂಗಿಲ್ಲ ನಂಗ್ಯಾರದು ಹದಿನೆಂಟಾಯಿತು ಅಂತ
ಕುಣಿಬೇಡ ಮಂಗ್ಯಾ ಇದು ಕಳೆದೋಗುವ ವಯಸ್ಸು
ಬೇಕಿಲ್ಲ ನಂಗಿನ್ನು ಉಪದೇಶ ಅಂತ
ಜರಿಯಬೇಡ ಮಂಗ್ಯಾ ಇದು ಹುಚ್ಚಕೋಡಿ ಮನಸ್ಸು

2. ಒಮ್ಮೆ ಅಪ್ಪಳಿಸಿದ ತೆರೆ
ಮರಳಿ ಬಾರದು ಮರುಳೆ
ತೊರೆಯುವ ಮುನ್ನ ಯೋಚಿಸು
ತೆರೆಯಾಗಿ ನಾ ಹೋದ ಮೇಲೆ
ನೊರೆಯಾಗಿ ಒಬ್ಬಳೆ ಉಳಿಯುವೆ ತೀರದಲ್ಲಿ

3.  ಬಿಡುವಿಲ್ಲದೆ ಓಡಿದೆ ನಾ
ಬಡತನದ ಹಸಿವಿಲ್ಲದೆ, ಸವಿಯಲು
ಸಿಹಿ ಬಾಲ್ಯದ ಕಡೆಗೆ
ಬರವಿಲ್ಲದ ಬಾವಗಳೆಡೆಗೆ

ತಡವಿಲ್ಲದೆ ಪಡೆದೆ ನಾ
ಬಯಸಿದ್ದನ್ನು ತಡಕಾಡದೆ, ಮರೆಯಲು
ಸಾದ್ಯವೇ ಬಾಲ್ಯದ ಹರುಶವನ್ನು
ನಾ ಹುಟ್ಟಿ ಬೆಳೆದ ವರುಶಗಳನ್ನು

4. ನೀರಿಲ್ಲದ ನದಿಯಾಗ ಉಳುವೆ
ಮಾಡಬೇಡ, ಇಂದಲ್ಲ ನಾಳೆ
ಕೊಚ್ಚಿ ಹೋದಿತು ಬೆಳೆ

ನಾನಿಲ್ಲದ ಬದಿಯಾಗ ಬಾಳುವೆ
ಮಾಡಬೇಡ, ಬಂದಾಗ ನಾ ಬಳಿ
ಚುಚ್ಚಿ ನನ್ನ ಕೊಲ್ಲಬೇಡ

(ಚಿತ್ರ ಸೆಲೆ: divyanshuvermakayasth.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: