ಬೆಳಗಿನ ತಿಂಡಿಗೆ ಮಾಡಿನೋಡಿ ಪಾಲಾಕ್ ಅನ್ನ

– ಪ್ರತಿಬಾ ಶ್ರೀನಿವಾಸ್.

maxresdefault

ಬೆಳಗಿನ ತಿಂಡಿಗೆ ಏನಾದರು ಹೊಸತಾಗಿ ಮಾಡಬೇಕಾ? ಹಾಗಾದರೆ ಈ ಪಾಲಾಕ್ ಅನ್ನ ಮಾಡಿನೋಡಿ, ಬೇಗನೆ ಆಗುತ್ತೆ ಜೊತೆಗೆ ರುಚಿಯಾಗಿಯೂ ಇರುತ್ತದೆ.

ಬೇಕಾಗುವ ಸಾಮಾಗ್ರಿಗಳು:

ಪಾಲಾಕ್ ಸೊಪ್ಪು – 1 ಕಟ್ಟು
ಕೊತ್ತಂಬರಿ ಸೊಪ್ಪು – 1/2 ಕಟ್ಟು
ಅಕ್ಕಿ(ಸೋನಾ ಮಸೂರಿ) – 1 ಲೋಟ
ಈರುಳ್ಳಿ – 2-3
ಟೊಮೊಟೊ – 2 (ಸಣ್ಣ ಗಾತ್ರದ್ದು)
ಹಸಿಮೆಣಸು – 5-6
ಬಟಾಣಿ – 1/4 ಕಪ್(ಹಿಂದಿನ ರಾತ್ರಿ ನೆನೆಸಿಡಿ)
ನಿಂಬೆಹಣ್ಣು – 1/2
ಶುಂಟಿ – ಒಂದುವರೆ ಇಂಚು
ಬೆಳ್ಳುಳ್ಳಿ – 8-10 ಎಸಳು
ಚಕ್ಕೆ – 1 (ಚಿಕ್ಕದು)
ಏಲಕ್ಕಿ – 1
ಲವಂಗ – 2 ರಿಂದ 3
ಪಲಾವಿನ ಎಲೆ (ಇಲ್ಲವೇ ಬಿರಿಯಾನಿ ಎಲೆ) – 1
ಅರಿಶಿನ, ಉಪ್ಪು

ಮಾಡುವ ಬಗೆ:

ಮೊದಲಿಗೆ ಹಸಿಮೆಣಸು, 1/2 ಈರುಳ್ಳಿ, ಶುಂಟಿ, ಬೆಳ್ಳುಳ್ಳಿ, ಪಾಲಾಕ್ ಸೊಪ್ಪನ್ನು ಎಣ್ಣೆಯಲ್ಲಿ ಬಾಡಿಸಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಕ್ಕೊಳ್ಳಿ. ಬಳಿಕ ಒಂದು ಕುಕ್ಕರ್ ಗೆ 5-6 ಚಮಚದಶ್ಟು ಎಣ್ಣೆ ಹಾಕಿ ಅದು ಕಾದನಂತರ ಚಕ್ಕೆ, ಲವಂಗ-ಏಲಕ್ಕಿ, ಪಲಾವ್ ಎಲೆ, ಈರುಳ್ಳಿ ಹಾಕಿ ಬಾಡಿಸಿಕೂಳ್ಳಿ. ನಂತರ ಇದಕ್ಕೆ ಟೊಮೊಟೊ, ನೆನೆಸಿದ ಬಟಾಣಿ, ಚಿಟಿಕೆ ಅರಶಿನ, ರುಬ್ಬಿದ ಮಸಾಲೆ ಹಾಕಿ ರುಚಿಗೆ ತಕ್ಕಶ್ಟು ಉಪ್ಪು ಹಾಕಿ ತಿರುವಿ. ನಂತರ 2 ಲೋಟ ನೀರು ಒಂದು ಲೋಟ ಅಕ್ಕಿ ಹಾಕಿ ನಿಂಬೆಹಣ್ಣು ಹಿಂಡಿ ಕುಕ್ಕರಿನಲ್ಲಿ 2 ಸೀಟಿ ಹೊಡೆಸಿದರೆ ಪಾಲಾಕ್ ಅನ್ನ ಸವಿಯಲು ಸಿದ್ದ.

(ಚಿತ್ರ ಸೆಲೆ: youtube)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: