ದೇವರ ಆಟ

– ಕಾರ‍್ತಿಕ್ ಪತ್ತಾರ.

omnicience

ಕಳ್ಳ ಮಾಡಿದ್ ಕಳ್ತನವ ಕುರುಡಾ ನೋಡ್ಬುಟ್ಟ
ಮೂಗ ಚಾಡಿ ಹೇಳೋದನ್ನ ಕಿವುಡಾ ಕೇಳ್ಬುಟ್ಟಾ
ಮ್ಯಾಲ್ ಕುಂತವ್ನೆ ದೇವ್ರು ಎಲ್ಲಾ ನೋಡಿ ನಕ್ಬುಟ್ಟಾ
ಸತ್ಯವನ್ನ ಸುಳ್ಳಿನ್ ತಕ್ಡೀಲ್ ಇಟ್ಟು ತೂಗ್ಬುಟ್ಟಾ

ಕಡ್ಡಿ ಗೀರಕ್ ಮುಂಚೆ ಬೆಂಕಿ ಎಂದು ಹತ್ತಲ್ಲ
ನಾಶ ಆಗೋ ತನ್ಕ ಎಂದೂ ಆಸೆ ತೀರೋಲ್ಲ
ಕಾಲಿ ಇರುವಾ ಹಣೆಯಾ ಹಿಂದೆ ಸತ್ಯ ಐತಲ್ಲ
ಬಟ್ಟೆ ಹಾಕೊಂಡ್ ಮಾಡೋ ತಪ್ಪನ್ ಕತ್ತಲೆ ಒಪ್ಪಲ್ಲ

ಕಾಲಿನ್ ಕೆಳಗೆ ಇರೋ ಚಪ್ಲಿ ಮುಳ್ಳನ್ ನೋಡಲ್ಲ
ತುಳಿಯಕ್ ಹತ್ರ ಬರುತದೆ ಅಂತ ಮುಳ್ಳು ಬಗ್ಗಲ್ಲ
ಮನ್ಸು ಒಂದು ಕುದ್ರೆ ತರ ಎಲ್ಲೂ ನಿಲ್ಲಲ್ಲ
ಲಗಾಮ್ ಹಾಕಿ ಇಟ್ಕೋ ಮಗನೆ ಹಾದಿ ತಪ್ಪಲ್ಲ

( ಚಿತ್ರ ಸೆಲೆ:  mysticalchrist.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: