ಕುರಿಮಾಂಸದ ಪ್ರೈ ಮಾಡುವ ಬಗೆ

ರೇಶ್ಮಾ ಸುದೀರ್.

ಕುರಿಮಾಂಸ —— 3/4 ಕೆಜಿ
ನೀರುಳ್ಳಿ ——— 1
ಬೆಳ್ಳುಳ್ಳಿ ——— 1 ಗೆಡ್ಡೆ
ಟೊಮಟೊ ——- 1
ಅಚ್ಚಕಾರದಪುಡಿ —- 4 ಟಿ ಚಮಚ
ದನಿಯಪುಡಿ —— 1 ಟಿ ಚಮಚ
ಚಕ್ಕೆ ———– 1 ಇಂಚು
ಲವಂಗ ——— 4
ಚಕ್ರಮೊಗ್ಗು ——- 1
ನಿಂಬೆರಸ ——- 1/2 ಟಿ ಚಮಚ
ಎಣ್ಣೆ ——— 1 ಟೇಬಲ್ ಚಮಚ
ಶುಂಟಿ ಬೆಳ್ಳುಳ್ಳಿ ಪೇಸ್ಟ್ — 1 ಟಿ ಚಮಚ
ಅರಿಸಿನ —– ಚಿಟಿಕೆ

ಮಾಡುವ ಬಗೆ:

ಕುಕ್ಕರ್ ಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಚಕ್ಕೆ, ಲವಂಗ ಹಾಗು ಚಕ್ರಮೊಗ್ಗು ಹಾಕಿ ಹೆಚ್ಚಿದ ನೀರುಳ್ಳಿಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಿರಿ. ಟೊಮಟೊ ಹಾಕಿ ಬೇಯಿಸಿ, ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಶುಚಿಮಾಡಿದ ಕುರಿಮಾಂಸ ಹಾಕಿ ಅರಿಸಿನ ಮತ್ತು ಉಪ್ಪುಹಾಕಿ. ಮಾಂಸ ನೀರು ಬಿಟ್ಟು, ನೀರು ಆರುತ್ತಾಬರುವಾಗ ಅಚ್ಚಕಾರದಪುಡಿ ಮತ್ತು ದನಿಯಪುಡಿ ಹಾಕಿ ಹುರಿಯಿರಿ. ಬೆಳ್ಳುಳ್ಳಿಯನ್ನು ಬಿಡಿಸಿ ಹಾಕಿ. 1 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 3-4 ವಿಶಲ್ ಬರಿಸಿ. ಮುಚ್ಚಳ ತೆಗೆದ ನಂತರ ಒಲೆಯ ಮೇಲಿಟ್ಟು ನೀರು ಆರುವವರೆಗೆ ಬಿಡಿ, ನಿಂಬೆರಸ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಕುರಿಮಾಂಸದ ಪ್ರಯ್ ತಯಾರಾಯಿತು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks