ಓ ಮನಸೇ ನೀನೇಕೆ ಹೀಗೆ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಓ ಮನಸೇ ನೀನೇಕೆ ಹೀಗೆ
ನಿನದು ಎಂದೆಂದೂ ಅರ‍್ತವಾಗದ ಬಾಶೆ
ಕಂಡಿದ್ದೆಲ್ಲವ ಬೇಕೆನ್ನುವೆ
ಸಿಗದಿದ್ದಾಗ ಪೇಚಾಡುವೆ

ಕಾಣದ ಪ್ರೀತಿಯ ಹುಡುಕಾಡುವೆ
ನಿನ್ನ ನೀ ಪ್ರೀತಿಸುವುದ ಮರೆತಿರುವೆ
ಸೋಲೊಂದು ಎದುರಾದಾಗ ಕುಗ್ಗುವೆ
ಅವರಿವರ ಮೊಸಳೆ ಕಣ್ಣೀರಿಗೆ ಕರಗುವೆ
ವಂಚನೆಗೆ ಒಳಗಾದಾಗ ಮತ್ತೆ ಮತ್ತೆ ಕೊರಗುವೆ

ಕಂಡ ಕಂಡ ದೇವರನು ಶಕ್ತಿ ನೀಡ್ ಎನ್ನುವೆ
ನಿನ್ನ ಒಳಗಿರುವ ಶಕ್ತಿಯ ಮರೆತಿರುವೆ
ಎಲ್ಲದಕ್ಕೂ – ಎಲ್ಲರಿಗೂ ಬಯಪಡುವೆ
ಆದರೆ ಅರಿಯದೆ ಬಯದ ಮೂಲ ನೀನಾಗಿರುವೆ

ಹೊರಗಿನವರು ಕೋಪ ಬರುವಂತೆ ಮಾಡುವರು ಎನ್ನುವೆ
ಆದರೆ ತಿಳಿಯದೆ ಕೋಪದ ಅಗ್ನಿ ಪರ‍್ವತ ಹೊತ್ತಿರುವೆ
ಬಲವಂತ ಸ್ನೇಹ-ಪ್ರೀತಿಗೆ ಕಾಯದೆ
ಸಾಗುತಿರು ನೀನು ಹಿಂದೆ ನೋಡದೆ

ಕಶ್ಟಗಳಿಗೆ ಹೆಗಲ ಕೊಡದವರಿಗೆ ಜರಿಯದೆ
ಉತ್ತರವಾಗು ಬರುವ ಎಲ್ಲ ಕಶ್ಟಗಳಿಗೆ
ಸಾದನೆಯ ಬೆಳಕಾಗಿ, ಉತ್ಸಾಹದ ಬುಗ್ಗೆಯಾಗಿ
ನಿನ್ನವರಿಗಾಗಿ ಆಸರೆಯಾಗಿ ನಡೆ ಮುಂದೆ

( ಚಿತ್ರ ಸೆಲೆ: wikihow.com )

ಇವುಗಳನ್ನೂ ನೋಡಿ

1 ಅನಿಸಿಕೆ

ಅನಿಸಿಕೆ ಬರೆಯಿರಿ: