ಪ್ರಶ್ನೆ ಮೂಡಿದೆ ಎದೆಯಲ್ಲಿ

– ಸುರಬಿ ಲತಾ.

ಕಟ್ಟು ಕಟ್ಟು ಪುಸ್ತಕಗಳ ತಂದಿಟ್ಟು
ಒಂದಕ್ಶರವೂ ಬಿಡದೆ ಓದಬಲ್ಲವರು
ತನ್ನ ಹಣೆಯ ಬರಹವ ಓದಲಾರರು

ಗಣಿತದ ಗೆರೆಗಳನ್ನು ಅಳತೆ ಮಾಡಿ ಮಾಡಿ
ಲೆಕ್ಕ ಹಾಕಬಲ್ಲವ, ಅಂಗೈ ರೇಕೆಗಳ
ತಿಳಿಯದಾದ

ಕನಸು ಕಟ್ಟುವವರ ನೋಡಿ ನಲಿವೆವು
ಅವರಿಗಾಗಿ ಒಳ್ಳೆಯ ಮನದಿ ಬೇಡುವೆವು
ನಮ್ಮ ಕನಸೇ ನಾವು ಮರೆವೆವು
ನಮಗಾಗಿ ಬೇಡುವವರ ನಾವು ಕಾಣೆವು

ಹೊರಗಿನ ಹೋರಾಟಕ್ಕೆ ಬೆಂಬಲ ತೋರುವೆವು
ನಮ್ಮ ಬಾಳಿನ ಯುದ್ದದಲ್ಲಿ ಇಂದು ನಾವು
ಸೋಲುತಿಹೆವು

ಬೇರೆಯವರ ಬಳಿ ವಾದಿಸಿ ನಾವು ನಮ್ಮನ್ನು
ಸಮರ‍್ತಿಸಿಕೊಳ್ಳುವೆವು, ನಮ್ಮ ಮನದಾಳದ
ಪ್ರಶ್ನೆಗಳಿಗೆ ನಾವು ಉತ್ತರಿಸಲಾಗದೇ ಹೋಗುವೆವು

ದೇಶ ಗೆಲ್ಲಲಿ, ನಾಡು ಗೆಲ್ಲಲಿ ಎಂಬ ಆಸೆ ಮೂಡಿದೆ
ಜೀವನದ ದ್ಯೇಯವಿದೆ, ಅದು ಗೆಲ್ಲುವುದೋ, ಸೋಲುವುದೋ
ಅನುಮಾನ ಕಾಡಿದೆ ಮನದಲ್ಲಿ

ವರುಶಗಳು ಜೀವಿಸಿ ಸವೆದೆವು ಬಾಳ ರತದಲ್ಲಿ
ಸುಕ, ದುಕ್ಕ ಎನ್ನದೇ ನಡೆದೆವು ಜೀವನ ಪತದಲ್ಲಿ
ನಮಗಾಗಿ ನಾವು ಬಾಳಿದೆವಾ ಎಂದಾದರೂ?
ಪ್ರಶ್ನೆ ಮೂಡಿದೆ ಎದೆಯಲ್ಲಿ

ಒಳ್ಳೆಯ ಕಾಲಕ್ಕೆ ಕಾದು ಕಾದು ಸೋತೆವಾ
ಬಾಳಿನಲ್ಲಿ? ಗುರಿ ಮುಟ್ಟವುದರೊಳಗೆ
ಸಾವೇ ಬರುವುದಾ ಎದುರಲ್ಲಿ?

(ಚಿತ್ರ ಸೆಲೆ: human.cornell.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks