ಮಾಡಿ ನೋಡಿ “ಕೈಮಾ ಉಂಡೆ”

 ಮದು ಜಯಪ್ರಕಾಶ್.

ಬೇಕಾಗುವ ಸಾಮಾನುಗಳು:

  • 1/4 ಕೆಜಿ ಮೂಳೆ ರಹಿತ ಮಾಂಸ
  • 1 ಮೊಟ್ಟೆ
  • 1/2 ಹೋಳು ಕಾಯಿ ತುರಿ
  • 1 ಬೆಳ್ಳುಳ್ಳಿ
  • 1 ಈರುಳ್ಳಿ
  • 1 ಹಿಡಿ ಮೆಂತ್ಯಸೊಪ್ಪು, ಪುದೀನ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು
  • ಉಪ್ಪು ರುಚಿಗೆ ತಕ್ಕಶ್ಟು, ಸ್ವಲ್ಪ ಅರಿಶಿಣ
  • 1/4 ಚಮಚ ಕಾಳು ಮೆಣಸಿನ ಪುಡಿ
  • 1 ಚಮಚ ಹುರಿಗಡಲೆ
  • 1/4 ಚಮಚ ಚಕ್ಕೆಲವಂಗ ಪುಡಿ
  • 3-4 ಚಮಚ ದನಿಯ ಪುಡಿ
  • 1/2 ಟೊಮೋಟೊ
  • 3 1/2 ಇಂಚು ಶುಂಟಿ

ಮಾಡುವ ಬಗೆ

ಮಾಂಸ ರುಬ್ಬಿಕೊಳ್ಳುವುದು:

ಮೂಳೆ ರಹಿತ ಮಾಂಸವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ (ಈರುಳ್ಳಿಯನ್ನು ಸಣ್ಣ ತುಂಡಾಗಿಸುವ ಹಾಗೆ) ಕತ್ತರಿಸಿಕೊಳ್ಳಿ. ನಂತರ ನೀರು ಹಾಕದೆ ಮಾಂಸವನ್ನು ಮಿಕ್ಸಿಯಲ್ಲಿ ಒಂದು ಸುತ್ತು ರುಬ್ಬಿಕೊಳ್ಳಿ.

ಕೈಮಾ ಮಸಾಲೆ ರುಬ್ಬಿಕೊಳ್ಳವುದು:

1/2 ಬೆಳ್ಳುಳ್ಳಿ, 1 ಇಂಚು ಶುಂಟಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1/2 ಈರುಳ್ಳಿ, 1 ರಿಂದ 1 1/2 ಚಮಚ ದನಿಯ ಪುಡಿ, 1/4 ಚಮಚ ಕಾಳು ಮೆಣಸಿನ ಪುಡಿ, 1 ಚಮಚ ಹುರಿಗಡಲೆ, 1/4 ಚಮಚ ಚಕ್ಕೆಲವಂಗ ಪುಡಿ, 2 ಚಮಚ ಕಾಯಿ ತುರಿ, ಸ್ವಲ್ಪ ಪುದೀನ ಸೊಪ್ಪು, ಸ್ವಲ್ಪನೀರು(1 ರಿಂದ 2 ಚಮಚ, ನೀರು ಹೆಚ್ಚಾದರೆ ಉಂಡೆ ಕಟ್ಟಲು ಆಗುವುದಿಲ್ಲ) ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಮೊದಲೇ ರುಬ್ಬಿಟ್ಟುಕೊಂಡ ಮಾಂಸ ಹಾಕಿ ಮತ್ತೊಮ್ಮೆ ರುಬ್ಬಿರಿ.

ಗ್ರೇವಿ ಮಸಾಲೆ ರುಬ್ಬಿಕೊಳ್ಳವುದು:

2 ಟೀ ಸ್ಪೂನ್ ತೆಂಗಿನಕಾಯಿತುರಿ, 1 ಟೀ ಸ್ಪೂನ್ ದನಿಯ ಪುಡಿ, 1/2 ಟೀ ಸ್ಪೂನ್ ಅಚ್ಚ ಕಾರದ ಪುಡಿ, ಸ್ವಲ್ಪ ಅರಿಶಿಣ, ಕೊತ್ತಂಬರಿ ಸೊಪ್ಪು, 1/4 ಈರುಳ್ಳಿ, 7-8 ಬೆಳ್ಳುಳ್ಳಿ ಎಸಳು, 1 ಇಂಚು ಶುಂಟಿ, 1 ಟೊಮೋಟೊ, 1/2 ಟೀ ಸ್ಪೂನ್ ಚಕ್ಕೆ ಲವಂಗ ಪುಡಿ, ಸ್ವಲ್ಪ ನೀರು ಹಾಕಿ ರುಬ್ಬಿ ಕೊಳ್ಳಿ.

ಪ್ರೈ ಮಾಡುವ ವಿದಾನ:

ರುಬ್ಬಿದ ಕೈಮಾಗೆ 1 ಮೊಟ್ಟೆ ಸೇರಿಸಿ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಇಟ್ಟುಕೊಳ್ಳಿ. ಬಾಣಲೆಯಲ್ಲಿ 2 ರಿಂದ 3 ಟೀ ಸ್ಪೂನ್ ಎಣ್ಣೆ, ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಕರಿಬೇವು ಸ್ವಲ್ಪ ಹಾಕಿ ಪ್ರೈ ಮಾಡಿ. ಇದಕ್ಕೆ ಉಂಡೆಗಳನ್ನು ಹಾಕಿ ಹುರಿಯಿರಿ (ಉಂಡೆಗಳು ಒಡೆದು ಹೋಗದ ಹಾಗೆ).

ಬೇರೊಂದು ಬಾಣಲೆಯಲ್ಲಿ 2 ಟೀ ಸ್ಪೂನ್ ಎಣ್ಣೆ, ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ, ಅದಕ್ಕೆ ಗ್ರೇವಿ ಮಸಾಲೆಯನ್ನು ಹಾಕಿ. 1/2 ದಿಂದ 1 ಲೋಟ ನೀರು , ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕುದಿಸಿ. ಮಸಾಲೆ ಬೆಂದ ಮೇಲೆ ಪ್ರೈ ಮಾಡಿಟ್ಟ ಉಂಡೆಗಳನ್ನ ಹಾಕಿ 10 ನಿಮಿಶ ಕುದಿಸಿ, ಇಳಿಸಿ.

ಅಶ್ಟೆ. ಬಿಸಿ ಬಿಸಿ ಕೈಮಾ ಉಂಡೆ ತಯಾರು!

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: