ಕ್ರಿಕೆಟ್ ಬರಹಗಳ ಕಿರುಹೊತ್ತಗೆ

– ಹರ‍್ಶಿತ್ ಮಂಜುನಾತ್.

ನನಗೆ ಬರೆಯುವ ಗೀಳು ಎಳವೆಯಿಂದ ಇದ್ದರೂ, ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಸರಿಯಾದ ವೇದಿಕೆಯೊಂದು ಬೇಕಿತ್ತು. ಆ ಹೊತ್ತಿಗೆ ನನ್ನ ಕಯ್ ಹಿಡಿದದ್ದು ಹೊನಲು. ಬರಿ ಹಾಳೆಗಳಲ್ಲಿ ಉಳಿಯುತ್ತಿದ್ದ ನನ್ನ ಬರಹಗಳನ್ನು ಸಾವಿರಾರು ಓದುಗರ ಮುಂದಿಟ್ಟಿದ್ದು ಹೊನಲು ಮಿಂಬಾಗಿಲು.

ಎಲ್ಲಾ ಬಗೆಯ ಬರಹಗಳನ್ನು ಬರೆಯುವ ಬಯಕೆ ನನ್ನದಾದರೂ, ದಾಂಡಾಟದ (Cricket) ಬಗೆಗಿನ ಬರಹಗಳು ನನ್ನ ನೆಚ್ಚಿನವು. ಎಳವೆಯಿಂದಲೂ ಆಡಿಕೊಂಡು ಬಂದ ದಾಂಡಾಟದ ಕುರಿತ ಬರಹಗಳನ್ನು ಬರೆಯುವುದು ತೊಡಕಿನ ಸಂಗತಿಯೇನೂ ಆಗಲಿಲ್ಲ. ಹಾಗಾಗಿಯೇ ದಾಂಡಾಟ ಬೆಳೆದು ಬಂದ ಬಗೆ, ಚೆಂಡು ತಯಾರಿಸುವ ಬಗೆ, ಎಸೆತಗಾರಿಕೆ ಕುರಿತಂತೆ ದಾಂಡಾಟದ ಬಗೆಗಿನ ಬರಹಗಳನ್ನು ಹೊನಲುವಿನಲ್ಲಿ ಮೂಡಿಸಲಾಗಿತ್ತು. ಹೀಗೆ ಹೊನಲಿನಲ್ಲಿ ಮೂಡಿಬಂದ ದಾಂಡಾಟದ ಬರಹಗಳನೆಲ್ಲಾ ಒಟ್ಟು ಸೇರಿಸಿ, ಹೊನಲು ತಂಡ ಒಂದು ಕಿರು ಹೊತ್ತಗೆಯನ್ನು ಹೊರತರುತ್ತಿರುವುದು ನಿಜಕ್ಕೂ ನಲಿವಿನ ಸಂಗತಿ. ಸದಾ ಬರಹಗಾರರ ಬೆನ್ನು ತಟ್ಟುತ್ತಾ, ಹೊಸ ಹೊಸ ಬಗೆಯ ಬರಹಗಳನ್ನು ಮೂಡಿಸುತ್ತಾ, ಕನ್ನಡದಲ್ಲಿ ಹೊಸತನವನ್ನು ಕಟ್ಟ ಹೊರಟಿರುವ ಹೊನಲುವಿಗೆ ಸವಿ ನಲವರಿಕೆಗಳು.

ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡು ನನ್ನ ಬರವಣಿಗೆಗೆ ಹುರುಪು ತುಂಬಲು ಕೇಳಿಕೊಳ್ಳುತ್ತೇನೆ.

ಕಿರುಹೊತ್ತಗೆಯನ್ನು ಓದಲು ಇಲ್ಲಿ ಒತ್ತಿ.

 

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: