ಹೊನಲುವಿಗೆ 4 ವರುಶ ತುಂಬಿದ ನಲಿವು

– ಹೊನಲು ತಂಡ.

ದಿನೇ ದಿನೇ ಹೆಚ್ಚು ಮಂದಿ ಮೆಚ್ಚುಗೆಗಳಿಸುತ್ತಾ ಮುನ್ನಡೆಯುತ್ತಿರುವ ಹೊನಲು ತಾಣಕ್ಕೆ ಇಂದು ‘4’ ವರುಶ. ಹತ್ತಾರು ಕವಲುಗಳಲ್ಲಿ ದಿನವೂ ಹೊಸ ಹೊಸ ಬರಹಗಾರರ ಮೂಲಕ ಕನ್ನಡದಲ್ಲಿ ಹೊಸ ಬಗೆಯ ಬರಹಗಳನ್ನು ಮೂಡಿಸುತ್ತ, ಹೊಸ ಬರಹಗಾರರನ್ನೂ, ಓದುಗರನ್ನೂ ಹುಟ್ಟು ಹಾಕುತ್ತಾ ಬಂದಿದೆ ಹೊನಲು ತಾಣ. ಕತೆ, ಕವಿತೆ, ಸೋಜಿಗದ ಸಂಗತಿಗಳು, ಗ್ಯಾಜೆಟ್, ಕಾರುಗಳು, ಸುತ್ತಾಟ, ಅಡುಗೆ, ಜಾತ್ರೆ, ಕನ್ನಡ ನಾಡಿನ ಹಿನ್ನಡವಳಿ ಮುಂತಾದ ವಿಶಯಗಳ ಬಗ್ಗೆ ಎಡೆಬಿಡದೇ ಬರಹಗಳನ್ನು ಓದುಗರ ಮುಂದಿಡುತ್ತಾ ಹೊನಲು ಒಂದು ಆನ್ಲೈನ್ ಮ್ಯಾಗಜೀನ್ ಆಗಿ ಮಂದಿಯನ್ನು ಸೆಳೆಯುತ್ತಿದೆ. ಇದುವರೆಗೂ 1800ಕ್ಕೂ ಹೆಚ್ಚು ಬರಹಗಳು ಹೊನಲಿನಲ್ಲಿ ಮೂಡಿಬಂದಿವೆ. ಹೊನಲು ಪೇಸ್ಬುಕ್ ಪುಟ ಕ್ಕೆ 20,000 ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಮತ್ತು ಟ್ವಿಟ್ಟರ್ ನಲ್ಲಿ 1950 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವುದು ಹೊನಲಿನ ಹೆಗ್ಗಳಿಕೆ.

5ನೇ ವರುಶಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ, ಹೊನಲು ತಾಣ ತನ್ನದೇ ಮೊಬೈಲ್ ಬಳಕದ (app) ಬಿಡುಗಡೆಗೆ ಸಜ್ಜಾಗಿದೆ. ಬರಹಗಳನ್ನು ಮಾಡಿಕೊಡುತ್ತಿರುವ ಬರಹಗಾರರಿಂದ, ಆ ಬರಹಗಳನ್ನು ಓದುತ್ತಾ ಹುರಿದುಂಬಿಸುತ್ತಿರುವ ಓದುಗರಿಂದ ಮತ್ತು ಹೊನಲಿನ ಬರಹಗಳನ್ನು ಹಂಚಿಕೊಳ್ಳುತ್ತಾ ಅವುಗಳನ್ನು ಹೆಚ್ಚು ಜನರಿಗೆ ತಲುಪಿಸುತ್ತಿರುವ ಬೆಂಬಲಿಗರಿಂದ ಹೊನಲು ಈ ಮೈಲುಗಲ್ಲನ್ನು ತಲುಪಲು ಸಾದ್ಯವಾಗಿದೆ.

2017 ಏಪ್ರಿಲ್ 16 ರಂದು ‘ಮುನ್ನೋಟ’ ಮಳಿಗೆಯಲ್ಲಿ ಹೊನಲು app ಬಿಡುಗಡೆ ಕಾರ‍್ಯಕ್ರಮವು ನಡೆಯಲಿದ್ದು, ತಾವು ಈ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಕೋರಿಕೆ. ತಾವು ತಪ್ಪದೇ ಬನ್ನಿ ಮತ್ತು ಪರಿಚಯದವರನ್ನೂ ಕರೆ ತನ್ನಿ.

ಜಾಗ : ‘ಮುನ್ನೋಟ’, #67, ಸೌತ್ ಅವೆನ್ಯು ಕಾಂಪ್ಲೆ‍ಕ್ಸ್, ನಾಗಸಂದ್ರ ಸರ‍್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು – 560004.
ದಿನಾಂಕ : 16-04-2017 ರವಿವಾರ
ಹೊತ್ತು : ಬೆಳಗ್ಗೆ 11.30-12.30

ಹೆಚ್ಚಿನ ಮಾಹಿತಿಗಾಗಿ : https://www.facebook.com/events/224658481346491/

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: