ಬೂತಾಯ ಅಳಲು ಕೇಳಣ್ಣಯ್ಯ

ಶಿವರಾಜ್ ನಾಯ್ಕ್.

( ಬರಹಗಾರರ ಮಾತು: ಮನುಶ್ಯ ತನ್ನ ಸ್ವಾರ‍್ತಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನು ಮತ್ತು ಬೂಮಾತೆಯ ಅಳಲನ್ನು ಈ ಕವಿತೆಯಲ್ಲಿ ಹೇಳಲಾಗಿದೆ )

ಹಸಿರ ಸೀರೆ ಹರಿದಿದೆಯಲ್ಲ
ಬುವಿಯ ಒಡಲು ಕುಸಿದಿದೆಯಲ್ಲ
ಹಸುರಿನ ಉಸಿರು ನಿಲ್ಲುವುದಿಲ್ಲ
ಅದು ನಿನ್ನಯ ಸಾವು ನೋಡಣ್ಣಯ್ಯ

ಮೋಡದ ಗರ‍್ಜನೆ ಕೇಳಿಸುತ್ತಿಲ್ಲ
ಸೂರ‍್ಯನು ಮೈಯ್ಯ ಸುಡುತಿಹನಲ್ಲ
ಬುವಿಯು ದಹಿಸಿ ಹೋಗುವುದಿಲ್ಲ
ಅದು ನಿನ್ನಯ ನಾಶ ಕೇಳಣ್ಣಯ್ಯ

ಹಕ್ಕಿ-ಪಿಕ್ಕಿಯ ಕಲರವೂ ಇಲ್ಲ
ಮ್ರುಗಗಳು ಮಾಯವಾಗಿವೆಯಲ್ಲ
ಅವುಗಳ ನೀನು ಉಳಿಸಬೇಕಿಲ್ಲ
ಅದು ನಿನ್ನಯ ಅಳಿವ ಸುಳಿವಣ್ಣಯ್ಯ

ಇರಲು ನೀನು ಯೋಗ್ಯನೂ ಅಲ್ಲ
ಆದರೂ ನಿನ್ನ ದೂಡಲೇ ಇಲ್ಲ
ಒಡಲಲಿ ಮುಚ್ಚಿ ಅಳುತಿಹಳಲ್ಲ
ಇದು ಬೂತಾಯ ಅಳಲು ಕೇಳಣ್ಣಯ್ಯ

(ಚಿತ್ರ ಸೆಲೆ: timeanddate.com )

1 ಅನಿಸಿಕೆ

  1. ಒಳ್ಳೆಯ ಹಾಡು ಎದೆತುಂಬಿ ಬಂದಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.