ನನ್ನ ಪ್ರೀತಿಯ ತಂದೆಗೆ..

– ರಾಕೇಶ.ಹೆಚ್. ದ್ಯಾವನಗೌಡ್ರ.


ಎಂತ ನೋವು ಎದುರಾದರೂ
ಕಣ್ಣೀರು ಕಣ್ಣ ಮುಂದೆ ನಿಂತರೂ
ಆನಂದವೆನ್ನೊ ತೂಗುಯ್ಯಾಲೆಯಲ್ಲಿ ನನ್ನ ತೂಗಿದ
ತಂದೆಗೆ ಪ್ರೀತಿಯಿಂದ

ದಾರಿಯಲ್ಲಿ ಎಡವಿದಾಗ
ತಪ್ಪು ಹೆಜ್ಜೆ ಇಟ್ಟಾಗ
ನನ್ನ ಕೈ ಹಿಡಿದು ನಡೆಸಿದ
ತಂದೆಗೆ ಪ್ರೀತಿಯಿಂದ

ಸುಳ್ಳುಗಳನ್ನು ಹೇಳಿದಾಗ
ನಾ ಮಾಡಿದ ತಪ್ಪುಗಳನ್ನ
ಸಂತಸದಿಂದ ಮನ್ನಿಸಿದ
ತಂದೆಗೆ ಪ್ರೀತಿಯಿಂದ

ಈ ಪುಟ್ಟ ಮಗುವನ್ನು
ತೋಳಿನಲ್ಲಿ ಎತ್ತಿ ಆಡಿಸಿ, ಬೆಳೆಸಿ
ಜೀವನದಲ್ಲಿ ಗುರಿ ಮುಟ್ಟಿಸಿದ
ನನ್ನ ತಂದೆಗೆ ಪ್ರೀತಿಯಿಂದ

“ಹ್ರುದಯಪೂರ‍್ವಕ ವಂದನೆಗಳು”

(ಚಿತ್ರ ಸೆಲೆ:  thekingdomcorner.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: