ಅಬಿನವ ಬ್ರಾಡಮನ್

– ಚಂದ್ರಗೌಡ ಕುಲಕರ‍್ಣಿ.


ಕ್ರಿಕೆಟ್ ಆಟದ ದಂತ ಕತೆಯಿವ
ಮಾಸ್ಟರ್ ಬ್ಲಾಸ್ಟರ್ ಸಚಿನ್ !
ಕ್ರೀಡಾ ಪ್ರೀತಿಗೆ ಸಾಕ್ಶಿಯಾಗಿದೆ
ಕಲಕತ್ತ ಈಡನ್ ಗಾರ‍್ಡನ್ !

ಮಾಂತ್ರಿಕ ಸ್ಪರ‍್ಶಕೆ ಸಂತಸ ಪಟ್ಟವು
ಕೇಪ್ ಟೌನ್ ಸಿಡ್ನಿ ಮೆಲ್ ಬೋರ‍್ನ್ !
ಪುಟಾಣಿ ಪ್ರತಿಬೆಗೆ ಸೈ ಸೈ ಎನ್ನುತ
ಹಾಡಿ ಹೊಗಳಿತು ಲಂಡನ್ !

ಹುಡುಗನ ಹೊಡೆತದ ವೈಕರಿ ಕಂಡು
ಬೆಚ್ಚಿ ಬಿದ್ದನು ಇಮ್ರಾನ್ !
ಕನಸಲು ಬಂದು ಕಾಡುವನೆಂದ
ಕಾಂಗ್ರೂ ಸ್ಪಿನ್ನಿಗ ಶೆನ್ ವಾರ‍್ನ್ !

ಆಟಕೆ ಸ್ಪೂರ‍್ತಿ ನಡತೆಗೆ ಮಾದರಿ
ಲಿಟಲ್ ಮಾಸ್ಟರ ಸಚಿನ್ !
ಎಂದೂ ಮುರಿಯದ ದಾಕಲೆ ಬರೆದ
ಇವನೆ ಅಬಿನವ ಬ್ರಾಡಮನ್ !

( ಚಿತ್ರ ಸೆಲೆ: cnbc.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: