ನಾನು ಕಂಡ ಅಪ್ಪ

– ನವೀನ ಉಮೇಶ ತಿರ‍್ಲಾಪೂರ.

ತನ್ನೆಲ್ಲ ನೋವನ್ನು ಮರೆಮಾಚಿ
ನಗುಮೊಗದಿಂದ ನಗಿಸಿ ನಲಿದ ಮುಗ್ದ ಮನಸ
ಅಪ್ಪನನ್ನು ನಾ ಕಂಡೆ

ಕೈ ಹಿಡಿದು ಅಕ್ಶರವ ತೀಡಿಸಿದ
ನನ್ನ ಪ್ರತಮ ಗುರುವಾಗಿ
ಅಪ್ಪನನ್ನು ನಾ ಕಂಡೆ

ಎಡವಿ ಬಿದ್ದಾಗ ಬಿಗಿದಪ್ಪಿ
ಕಣ್ಣೀರ ಒರೆಸಿದ ಕರುಣಾಮಯಿ
ಅಪ್ಪನನ್ನು ನಾ ಕಂಡೆ

ತಪ್ಪು ಹೆಜ್ಜೆಯ ಇಟ್ಟಾಗ ಕೈ ಹಿಡಿದು
ಸರಿದಾರಿಯಲ್ಲಿ ನಡೆಸಿದ ಮಾರ‍್ಗದರ‍್ಶಿಯಾಗಿ
ಅಪ್ಪನನ್ನು ನಾ ಕಂಡೆ

ಕಶ್ಟಗಳ ಮುಚ್ಚಿಟ್ಟು ನೋವೆಲ್ಲ ತಾ ನುಂಗಿ
ನನ್ನ ಬೇಡಿಕೆಗಳ ಈಡೆರಿಸಿದ ದೇವರಂತ
ಅಪ್ಪನನ್ನು ನಾ ಕಂಡೆ

ಮನ್ನಿಸು ಈ ನಿನ್ನ ಪುಟ್ಟ ಕಂದನ
ಅರಿತೋ ಅರಿಯದೆ ನಿನ್ನ ಮನವ ನೋಯಿಸಿದ್ದರೆ…

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: