ದೂರ ಸರಿದವಳು…ಆಕೆ!!

ಸಿರಿ ಮೈಸೂರು.

ಕನಸು ಕೊಟ್ಟವನಾತ, ಮನಸು ಇಟ್ಟವನಾತ
‘ಜೀವವು ನೀ, ಜೀವನದಲ್ಲೂ ಬರಿ ನೀ’ ಎನ್ನುತ ಮನಸು ಕರಗಿಸಿದವನಾತ
ಈ ಪರಿ ಪ್ರೀತಿಯೂ ಉಂಟೆಂದು ಅಚ್ಚರಿ ಉಳಿಸಿದವನಾತ!

ವಾಸ್ತವ ತಿಳಿಸಿದವಳಾಕೆ, ಇಲ್ಲವೆಂದವಳಾಕೆ
‘ಕಶ್ಟವು ಜೀವನ, ನಮ್ಮಿಬರದು ಬೇರೆ ಬೇರೆ ಪಯಣ’ ಎನ್ನುತಲೇ ಸೋತವನಿಗೆ ಸ್ವಂತವಾದವಳಾಕೆ
ವಿಚಾರಗಳ ಬರಡು ಮನದಲ್ಲಿ ಪ್ರೀತಿಯ ಕ್ರುಶಿ ಮಾಡಿ ಕನಸುಗಳ ಬೆಳೆಸಿದವಳಾಕೆ

ಅಂದು.., ಕನಸುಗಳ ಕುರುಡೆಂದವನಾತ, ಜೊತೆಗಿರಲು ಜಗವು ಬಿಡದು ಎಂದವನಾತ
ಅಂದೇ.., ಕನುಸುಗಳ ಹೊಸಕಿದವಳಾಕೆ, ಪ್ರೀತಿ ಕೊಂದವಳಾಕೆ

‘ಜೀವದ ಗೆಳತಿ ನೀ’ ಎಂದವನು ‘ಜೀವನದಲ್ಲಿ ನೀನೊಬ್ಬಳು ಗೆಳತಿ’ ಎಂದಾಗ ಕಂಬನಿಯೊರೆಸಿಕೊಂಡು
ದೂರ ಸರಿದವಳು…ಆಕೆ!!

(ಚಿತ್ರ ಸೆಲೆ:  heartbreak-quotes.shtml )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: