ಯಾರೋ ಬಂದುಹೋದ ನೆನಪು ಎದೆಯಲಿ

ಚೇತನ್ ಪಟೇಲ್.

ಯಾರೋ ಬಂದುಹೋದ ನೆನಪು ಎದೆಯಲಿ
ಅಂದುಕೊಂಡೆ ನೀನೇ ಇರಬಹದೆಂದು ಮನದಲ್ಲಿ
ಏನೋ ಹೊಸತನ ನಿನ್ನ ಆಗಮನ ಬಾಳಲಿ
ತಿಳಿಯದೆ ಹೊಸ ಸಂಚಲನ ಮನಸಿನ ಮನೆಯಲಿ
ಈ ಬಾವನೆ ಸರಿಯನ್ನೋ ಸೂಚನೆ ಮುಕದಲಿ

ಸೂರ‍್ಯ ಚಂದ್ರರ ಬೆಳಕು ಬೂಮಿಗೆ
ಹೊಳೆವ ನಕ್ಶತ್ರ ಚಂದ ನೀಲಿ ಬಾನಿಗೆ
ನಿನ್ನ ನಗುವೇ ಹುರುಪು ಈ ಬಾಳಿಗೆ
ಬಾಡದ ಈ ಬಾವನೆ ಬರೆಯಲಾಗದ ಪರಿಕಲ್ಪನೆ
ಅನುದಿನ ಪ್ರತಿಕ್ಶಣ ಕಾಣಬೇಕು ನೀ ಕಣ್ಣಿಗೆ

ಹುಲ್ಲು ಗರಿಕೆ ಮೇಲೆ ಇಬ್ಬನಿ ಹೊಳಪು
ವಜ್ರದ ಹರಳಿನಿಂದ ಪ್ರತಿಪಲಿಸೋ ಬೆಳಕು
ಮಂಕಾಗಿ ನಾಚಿದೆ ನಿನ್ನ ಕಣ್ಣ ಕಾಂತಿಗೆ
ಮೂಡೋ ಕಾಮನಬಿಲ್ಲಿನ ಏಳು ಬಣ್ಣವು
ಹುಣ್ಣಿಮೆ ಪೂರ‍್ಣಚಂದ್ರನ ಬೆಳದಿಂಗಳೆಲ್ಲವು
ಕಪ್ಪಾಗಿದೆ ನಿನ್ನ ಕೆನ್ನೆ ಬಣ್ಣದೆದುರಿಗೆ

ಏನೋ ಹೇಳಬೇಕು ನಾನು ನಿನಗೀಗ
ಮಾತೇಯಿಲ್ಲ ಮೌನ ನೀ ಎದುರಾದಾಗ
ಬರೆಯಬೇಕು ಪತ್ರವೇ ಈ ದಿನವೇ
ಅಂದುಕೊಂಡ ಮರುಕ್ಶಣವೇ
ಕಾದು ಕುಳಿತೆ ಕೈಚಾಚಿ,
ಬಾ ಕೈ ಜೋಡಿಸು ನೀ ಬಾಳಸಂಗಾತಿ

( ಚಿತ್ರ ಸೆಲೆ: moviewriternyu.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: