ನಿನ್ನೊಳು ನಾನೋ? ನನ್ನೊಳು ನೀನೋ?

ಚೇತನ್ ಕೆ.ಎಸ್.

ಕೇಳಿಸುತ್ತಿದೆ ಗೆಳತಿ
ಹ್ರುದಯದ ವೀಣೆಯಲಿ ನಿನ್ನದೇ ನಾದ
ಮನದ ತುಂಬೆಲ್ಲಾ ನಿನ್ನದೇ ರಾಗ
ಮತಿ ತೇಲಾಡಿದೆ ನಿನ್ನದೇ ಅಮಲಿನಲಿ
ನರನಾಡಿಯಲ್ಲೂ ನಿನ್ನದೇ ಸಂಚಾರ

ದಿನನತ್ಯದ ಕೆಲಸದಲ್ಲೂ ನಿನ್ನದೇ ಗ್ನಾನ
ಕ್ಶಣಕ್ಶಣವೂ ನಿನ್ನದೇ ದ್ಯಾನ
ನನ್ನೇ ಮರೆತಿರುವೆ ನಿನ್ನಯ ಗುಂಗಿನಲಿ
ಮೌನದಿ ಮಾತಾಡಿರುವೆ ಮನಸಿನಲಿ

ನಿನ್ನಯ ಯಾವ ಮೋಹವಿಲ್ಲದಿದ್ದರೂ
ಅರಿಯದೇ ಅರೆಹುಚ್ಚನಾದೆ ನಿನ್ನ ನೆನೆ ನೆನೆದು
ನಿನ್ನ ಮೇಲೆ ಯಾವ ಆಸೆ ಇಲ್ಲದಿದ್ದರೂ
ಮನ ಸೋತಿದೆ ನಿನ್ನ ಬಿಟ್ಟಿರಲು

ಅರಿವಿಲ್ಲ ಎನಗೆ
ನನ್ನೊಳು ನೀನೋ..? ನಿನ್ನೊಳು ನಾನೋ..?
ಪರಿಹರಿಸುವೆಯಾ ಗೆಳತಿ
ನನ್ನೆದೆಯ ಬೇಗುದಿಯ?

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks