ಪುಟ್ಬಾಲ್ ಲೀಗ್ : ಕಾಲ್ಚೆಂಡು ಪ್ರಿಯರಿಗೆ ಹಬ್ಬದೂಟ

– ಚಂದ್ರಮೋಹನ ಕೋಲಾರ.

ಇಂಡಿಯನ್​ ಪ್ರೀಮಿಯರ‍್​ ಲೀಗ್​ನ ಅಬ್ಬರ ಇದೀಗ ತಾನೆ ಮುಗಿದಿದೆ. ಐ ಪಿ ಎಲ್ ನಡೆಯುವಾಗ ಬೆಂಗಳೂರಲ್ಲಿ ಬಹುತೇಕರು ಆರ‍್​​ರ‍್​ರ‍್​​ರ‍್​​… ಸೀಸೀಸೀ.. ಬೀಬೀಬೀ.. ಅಂತಾ ಕೂಗಿದ್ರೆ, ಮುಂಬೈನಲ್ಲಿ ಮುಂಬೈ ಇಂಡಿಯನ್ಸ್​ ಪರ ಗೋಶಣೆಗಳು ಕೇಳಿ ಬರುತ್ತವೆ. ಪುಣೆಯಲ್ಲಿ ಸೂಪರ‍್​ ಜೈಂಟ್ಸ್​, ಕೋಲ್ಕತಾದಲ್ಲಿ ನೈಟ್​ರೈಡರ‍್ಸ್​, ಹೈದರಾಬಾದ್​ನಲ್ಲಿ ಸನರೈಸರ‍್ಸ್​​, ಪಂಜಾಬಿನಲ್ಲಿ ಕಿಂಗ್ಸ್​ ಇಲೆವೆನ್… ಅವರವರ ತವರಲ್ಲಿ ಅವರವರ ಅಬಿಮಾನಿಗಳು ಗೋಶಣೆ ಕೂಗುತ್ತಾ, ತಮ್ಮ ತಂಡಗಳಿಗೆ ಬೆಂಬಲ ನೀಡ್ತಾರೆ. ಆದರೆ, ಬಾರತೀಯರಲ್ಲಿ ಬಹುತೇಕರಿಗೆ ಗೊತ್ತೇ ಇಲ್ಲದ ಮತ್ತೊಂದು ಆಟವಿದೆ. ಆ ಆಟದ ಬಗ್ಗೆ ಗೊತ್ತಿದ್ರೂ ಪ್ರೀ ಕಿಕ್​ಗೂ, ಪೆನಾಲ್ಟಿ ಕಿಕ್ ​ಗೂ ವ್ಯತ್ಯಾಸ ಗೊತ್ತಿಲ್ಲದವರೂ ಕಂಡಲ್ಲಿ ಸಿಗ್ತಾರೆ. ಅದೇ ಪುಟ್ಬಾಲ್​ ಅನ್ನೋ ರೋಚಕ, ಮೈನವಿರೇಳಿಸೋ ಆಟ.

ವರ‍್ಶ ಪೂರ‍್ತಿ ಕ್ರಿಕೆಟ್​ನಲ್ಲಿ ಎರಡು ದೇಶಗಳ ನಡುವೆ ಸರಣಿ ನಡೆಯುತ್ತೆ. ಆದರೆ ಪ್ರತಿದಿನ ಕ್ರಿಕೆಟ್​ ಪಂದ್ಯಗಳು ನಡೆಯುವುದು ಅಪರೂಪ. ಆದ್ರೆ, ಪುಟ್ಬಾಲ್​ ಹಾಗಲ್ಲ. ಪ್ರತಿದಿನ ಒಂದಲ್ಲಾ ಒಂದು ಲೀಗ್​ ನಡೆಯುತ್ತಲೇ ಇರುತ್ತೆ. ವರ‍್ಶ ಪೂರ‍್ತಿ ಕಾನೂನು ಬದ್ದ ಬೆಟ್ಟಿಂಗ್​ ನಡೆಯುತ್ತೆ. ಅಶ್ಟರ ಮಟ್ಟಿಗೆ ಪುಟ್ಬಾಲ್​ ವಿಶ್ವವನ್ನ ಆಕ್ರಮಿಸಿದೆ. ಪುಟ್ಬಾಲ್​ನಲ್ಲಿ ಏನಿದ್ರೂ ಕ್ಲಬ್​ಗಳದ್ದೇ ಅಬ್ಬರ. ಕ್ಲಬ್​ಗಳ ಮುಂದೆ ದೇಶ ಲೆಕ್ಕಕ್ಕಿಲ್ಲ ಎಂದಲ್ಲ. ಬದಲಿಗೆ ಪುಟ್ಬಾಲ್​ ಎಂಬುದೇ ಕ್ಲಬ್​​ಗಳ ಆಟ.

ಇಂತಾ ಪುಟ್ಬಾಲ್​ ವಿಶ್ವಕಪ್​ ನಡೆದರೆ, ಎರಡು ದೇಶಗಳ ನಡುವಿನ ಯುದ್ದ ನಿಂತ ಅದೆಶ್ಟೋ ಉದಾಹರಣೆಗಳು ಸಿಗುತ್ತವೆ. ಎರಡು ಕ್ಲಬ್​ಗಳ ನಡುವಿನ ಗುದ್ದಾಟ, ಬಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್​ ಪಂದ್ಯದಶ್ಟೇ ಕುತೂಹಲ ಕೆರಳಿಸುತ್ತೆ ಎಂಬುದು ಪುಟ್ಬಾಲ್​ಗಿರೋ ಶಕ್ತಿಯ ಪ್ರತೀಕ ಎಂದರೆ ತಪ್ಪಲ್ಲ. ಅದು ಇಂಗ್ಲೀಶ್​ ಪ್ರೀಮಿಯರ‍್​ ಲೀಗ್ ಇರಲಿ, ಸ್ಪ್ಯಾನಿಶ್​ ಲಾ ಲೀಗಾ ಇರಲಿ, ಇಟಾಲಿಯನ್​ ಸೀರೀ ಏ, ಪ್ರಾನ್ಸ್​ನ ಲೀಗ್​ 1, ಜರ‍್ಮನಿಯ ಬಂಡೆಸ್ ಲಿಗಾ ಇರಲಿ… ಅಲ್ಲೊಂದು ಐತಿಹಾಸಿಕ ವೈಶಮ್ಯದ ಅದ್ಯಾಯ ಇದ್ದೇ ಇರುತ್ತದೆ. ಅಶ್ಟರ ಮಟ್ಟಿಗೆ ಪುಟ್ಬಾಲ್​ ಆ ದೇಶಗಳನ್ನ ಆವರಿಸಿಕೊಂಡಿದೆ.

ಕ್ರಿಕೆಟ್​ ಜನಿಸಿದ ನಾಡಲ್ಲೇ ಪುಟ್ಬಾಲ್​ ಕೂಡ ಜನ್ಮ ತಳೆದಿದೆ. ಇಂಗ್ಲೆಂಡ್​ನವರಿಗೆ ಕ್ರಿಕೆಟ್​ ವಿಶ್ವಕಪ್​ ಗೆಲ್ಲದೇ ಇರೋದು ಮುಕ್ಯವೇ ಅಲ್ಲ. ಅದೇ ಯುರೋ ಕಪ್​ನಲ್ಲೋ, ಪುಟ್ಬಾಲ್ ವಿಶ್ವಕಪ್​ನಲ್ಲೋ ತಮ್ಮ ತಂಡ ಪಾಲ್ಗೊಳ್ಳದೇ ಇದ್ದರೆ, ಅವರಿಗೆ ಬರೋ ಸಿಟ್ಟು ನಿರೀಕ್ಶೆಗೆ ಮೀರಿದ್ದು. ಇಂಗ್ಲೀಶ್​ ಪ್ರೀಮಿಯರ‍್​ ಲೀಗ್​ನಲ್ಲಿ ಮ್ಯಾಂಚೆಸ್ಟರ‍್ ಯುನೈಟೆಡ್​ ಮತ್ತು ಲಿವರ‍್​ಪೂಲ್​, ಮ್ಯಾಂಚೆಸ್ಟರ‍್​ ಯುನೈಟೆಡ್​ ಮತ್ತು ಆರ‍್ಸೆನಲ್​, ಮ್ಯಾಂಚೆಸ್ಟರ‍್​ ಯುನೈಟೆಡ್​ ಮತ್ತು ಮ್ಯಾಂಚೆಸ್ಟರ‍್​ ಸಿಟಿ ನಡುವಿನ ಪಂದ್ಯಗಳಿಗೆ ಕಾದು ಕೂರುವ ಅಬಿಮಾನಿಗಳ ಪಡೆಗೆ ಕಡಿಮೆ ಇಲ್ಲ. ಪ್ರತಿಯೊಂದು ಕ್ಲಬ್​ನ ಆಟಗಾರನಿಗೂ ಆ ಕ್ಲಬ್​ ಅಬಿಮಾನಿಗಳು ಹಾಡು ರಚಿಸ್ತಾರೆ. ಸಾಂಪ್ರದಾಯಿಕ ಎದುರಾಳಿ ಕ್ಲಬ್​ನ ಆಟಗಾರನಿಗಾಗಿ ಕುಹಕದ ಹಾಡಿನ ಮೂಲಕ ಆತ್ಮಸ್ತೈರ‍್ಯ ಕುಗ್ಗಿಸೋ ಕೆಲಸವನ್ನು ಮಾಡುತ್ತಾರೆ. ಬಾರತದ ಮೋಹನ್​ ಬಗಾನ್​ ಮತ್ತು ಈಸ್ಟ್​ ಬೆಂಗಾಲ್​ನಲ್ಲೂ ಹೀಗೆ ಮಾಡುವುದಿದೆ.

ಸ್ಪ್ಯಾನಿಶ್​ ಲಾ ಲೀಗಾದಲ್ಲಿ ರಿಯಲ್​ ಮ್ಯಾಡ್ರಿಡ್​ ಮತ್ತು ಬಾರ‍್ಸಿಲೋನ ನಡುವಿನ ಎಲ್​ ಕ್ಲಾಸಿಕೋ, ರಿಯಲ್​ ಮ್ಯಾಡ್ರಿಡ್​ ಮತ್ತು ಅತ್ಲೆಟಿಕೋ ಮ್ಯಾಡ್ರಿಡ್​ ನಡುವಿನ ಮ್ಯಾಡ್ರಿಡ್ ಡರ‍್ಬಿ ನೋಡೋಕೇ ಮುಗಿ ಬೀಳುವರ ಸಂಕೆ ಲಕ್ಶಗಳನ್ನ ದಾಟುತ್ತೆ. ಹೇಳಬೇಕು ಅಂದ್ರೆ ನಮ್ಮಲ್ಲಿ ನಡೆಯೋ ಐಪಿಎಲ್​​, ಇಂಗ್ಲೆಂಡಿನಲ್ಲಿ ನಡೆಯೋ ಇಂಗ್ಲೀಶ್​ ಪ್ರೀಮಿಯರ‍್​ ಲೀಗ್​ನ ಅವತರಣಿಕೆ ಅಶ್ಟೇ. ಅಲ್ಲಿ ಬೆಟ್ಟಿಂಗ್​ ಕಾನೂನು ಬದ್ದ, ಇಲ್ಲಿ ಬೆಟ್ಟಿಂಗ್​ ಕಾನೂನು ಬಾಹಿರ ಅನ್ನೋದೊಂದೇ ವ್ಯತ್ಯಾಸ.

ಇದು ಕೇವಲ ಇಂಗ್ಲೀಶ್​ ಪ್ರೀಮಿಯರ‍್​ ಲೀಗಿಗೆ ಸೀಮಿತವಲ್ಲ. ವಿಶ್ವದ ಎಲ್ಲ ಪುಟ್ಬಾಲ್​ ಲೀಗ್​ಗಳಿಗೂ ಅನ್ವಯಿಸುತ್ತೆ. ಜರ‍್ಮನಿ, ಬ್ರೆಜಿಲ್​, ಅರ‍್ಜೆಂಟೀನಾ, ಕೊಲಂಬಿಯಾ, ಉರುಗ್ವೆ, ಪರಾಗ್ವೆ, ಚಿಲಿ, ಅಮೆರಿಕದ ಮೇಜರ‍್​ ಸಾಕರ‍್​ ಲೀಗ್​, ಚೈನೀಸ್​ ಸೂಪರ‍್​ ಲೀಗ್​… ಪುಟ್ಬಾಲ್​ ಅನ್ನೋದೇ ಹಾಗೆ.​ ಅದು ಶ್ರೀಮಂತರ ಆಟವೇ ಅಲ್ಲ. ಜನ ಸಾಮಾನ್ಯರ ಆಟ. ಈ ಆಟದಲ್ಲಿ ಸ್ಟಾರ‍್​ಗಳಾಗಿರೋರಲ್ಲಿ ಬಹುತೇಕರು ಒಪ್ಪೊತ್ತಿನ ಊಟಕ್ಕೆ ಪರದಾಡ್ತಿದ್ದೋರು. ಗಲ್ಲಿ ಗಲ್ಲಿಗಳಲ್ಲಿ ಯಾವುದೋ ವಸ್ತುವನ್ನ ಕಾಲ್ಚೆಂಡಿನಂತೆ ಕಂಡು, ಅದರಲ್ಲಿ ಆಟ ಆಡಿದೋರು. ಇಂತ ಗುಂಪಿನಲ್ಲಿ ಮೊದಲಿಗೆ ನಮ್ಮ ಕಣ್ಣ ಮುಂದೆ ಬರೋದು ಅಂದ್ರೆ ರೊನಾಲ್ಡಿನೋ. ಬ್ರೆಜಿಲ್​ ರಾಜದಾನಿ ರಿಯೋ ಡಿ ಜನೈರೋದ ಕೊಳಗೇರಿಯಲ್ಲಿ, ಪ್ಲಾಸ್ಟಿಕ್​ ಬಾಟಲಿಗಳನ್ನ ಗೋಲಿನೊಳಗೆ ತೂರಿಸೋ ಕಾಲ್ಚೆಳಕ ಕಂಡ ಕ್ಲಬ್​ನ ವ್ಯಕ್ತಿಯೊಬ್ಬ, ರೊನಾಲ್ಡಿನೋ ಅವರನ್ನ ಒಂದು ಕ್ಲಬ್​ಗೆ ಸೇರಿಸಿದ. ಬಳಿಕ ನಡೆದದ್ದು ಇತಿಹಾಸ. ರೊನಾಲ್ಡಿನೋ ಅದ್ಯಾವ ಮಟ್ಟಿಗಿನ ಕ್ರೇಜ್​ ಸಂಪಾದಿಸಿದರು ಅಂದ್ರೆ, ವಿಶ್ವದ ಅತ್ಯಂತ ದೊಡ್ಡ ಕ್ಲಬ್​ಗಳಲ್ಲಿ ಒಂದಾದ ಬಾರ‍್ಸಿಲೋನಾ, ಬಾಯರ‍್ನ್ ಮ್ಯೂನಿಕ್ ​ ಪ್ರತಿನಿದಿಸಿದ್ದರು. ಇದು ಪುಟ್ಬಾಲ್​ನ ಮಾಯೆ.

( ಮುಂದಿನ ಬರಹದಲ್ಲಿ : ಪುಟ್ಬಾಲ್ ಕ್ಲಬ್ ಗಳ ನಡುವಿನ ಕಾದಾಟ – ‘ಎಲ್ ಕ್ಲಾಸಿಕೋ’ )

( ಚಿತ್ರ ಸೆಲೆ:  sillyseason.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Ravi says:

    ಫುಟ್ಬಾಲ್ ಅಭಿಮಾನಿಯಾಗಿ ಕನ್ನಡದಲ್ಲಿ ಸುದ್ದಿ ಓದುತ್ತಿರುವುದು ನಿಜಕ್ಕೂ ಸಂತೋಷ ತಂದಿತು.

ಅನಿಸಿಕೆ ಬರೆಯಿರಿ:

%d bloggers like this: