ನೀ ಸುಮ್ಮನಿದ್ದು ಬಿಡು

– ಶಿವರಾಜ್ ನಾಯ್ಕ್.

(ಬರಹಗಾರರ ಮಾತು: ನಾವು ಸಾಮಾನ್ಯರಾಗಿದ್ದರೆ ಸಮಾಜ ನಮ್ಮನ್ನು ನೋಡುವ ರೀತಿ-ನೀತಿಗಳು, ನಾವು ಸಮಾಜದಲ್ಲಿ ಗುರುತಿಸಿಕೊಂಡಾಗ ಜನರ ಪ್ರತಿಕ್ರಿಯೆಗಳನ್ನು ಈ ಕವಿತೆಯಲ್ಲಿ ಹೇಳಲಾಗಿದೆ)

ನಕ್ಕರೆ ನಗಲಿ ಬಿಡು
ನಿನ್ನ ಅಳಿಸಲಾರರು ಬಿಡು
ಆಡಿದರೆ ಆಡಿಕೊಳ್ಳಲಿ ಬಿಡು
ನೀ ನಿನ್ನ ಮನವ ನೋಯಿಸದಿರು

ಮುನಿದರೆ ಮುನಿಯಲಿ ಬಿಡು
ನಿನ್ನ ಏನೂ ಮಾಡರು ಬಿಡು
ನೋಡಿದರೆ ನೋಡಲಿ ಬಿಡು
ನಿನ್ನ ಮನವ ಬಲ್ಲವರಲ್ಲಿವರು

ಹೋದರೆ ಹೋಗಲಿ ಬಿಡು
ನೀನೆದ್ದರೆ ಬರುವರು ಬಿಡು
ಮರೆತರೆ ಮರೆಯಲಿ ಬಿಡು
ನಿನ್ನ ಹಾರೈಸುವರಲ್ಲ ಇವರು

ಗ್ನಾನಿಯಾಗಿ ಬಂದುಬಿಡು
ನೀ ದನಿಕನಾಗಿ ಎದ್ದುಬಿಡು
ಆಗ ಸನಿಹ ಸುಳಿವರಿವರು
ತಲೆ ತಗ್ಗಿಸಿ ನಿಲುವರು, ತಲೆ ತಗ್ಗಿಸಿ ನಿಲುವರು

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: