ಕಾಯುತಿರುವೆ ನಿನಗಾಗಿ..

– ನವೀನ ಉಮೇಶ ತಿರ‍್ಲಾಪೂರ.

ಅಂದು ನಾ ಅರಿಯದೆ ತಪ್ಪೊಂದ ಮಾಡಿದೆ
ಮನ್ನಿಸೆನ್ನ ತಪ್ಪೆಂದು ಕೇಳುತಲೇ ಇರುವೆ ನಾನಿಂದಿಗೂ

ನಾವಿಬ್ಬರು ಕೂಡಿ ಕಳೆದ ಆ ಕ್ಶಣಗಳು
ಕೊಲ್ಲುತ್ತಿವೆ ಇಂದು ನೀ ಜೊತೆ ಇಲ್ಲವೆಂದು

ಸೇರಿ ಕಟ್ಟಿದ ಕನಸುಗಳು ನುಚ್ಚು ನೂರಾಗಿವೆ
ಹುಚ್ಚನಂತೆ ಜೋಡಿಸುತ್ತಿರುವೆ ನಾನೊಬ್ಬನೇ

ತಪ್ಪು ನಿನ್ನಿಂದಾಯಿತೋ ನನ್ನಿಂದಾಯಿತೋ ತಿಳಿಯದು
ಆದ ತಪ್ಪನು ಸರಿಮಾಡುವ ಬಯಕೆ, ಕೈ ಜೋಡಿಸುವೆಯಾ

ನಿನ್ನೊಮ್ಮೆ ಬಿಗಿದಪ್ಪಿ ನಿನ್ನ ಮುಂದೆ ಅಳುವ ಆಸೆ
ನಿನ್ನ ಹಣೆಗೊಂದು ಮುತ್ತನಿಟ್ಟು ಕ್ಶಮಿಸು ಎನ್ನುವಾಸೆ

ನಿನ್ನ ಆ ಪ್ರೀತಿಯ ಮಾತುಗಳು ನೀ ಕೊಟ್ಟ ಆ ಮುತ್ತುಗಳು
ಎನ್ನ ಕಣ್ಣೀರ ನೋಡಿ ಅಣುಕಿಸುತ್ತಿವೇ ಇಂದು

ನನ್ನ ಮೊದಲ ಪ್ರೀತಿ ನೀನು
ಈ ದೇಹದಿ ಉಸಿರು ಇರುವವರೆಗೂ ನೀನೊಬ್ಬಳೇ ಗೆಳತಿ

ನಿನ್ನ ಹೊರತು ಬೇರಾರಿಗೂ ಜಾಗವಿಲ್ಲ ನನ್ನಲಿ
ಮತ್ತೊಮ್ಮೆ ಆ ಪ್ರೀತಿಯ ಕೊಡುವೆಯಾ ಈ ಜೀವಕೆ

ಕಣ್ಣೀರು ಬರುತಿದೆ ನನಗಿಂದು
ನೆನೆದು ನೆನೆದು ಆ ದಿನಗಳ

ಬಂದೊಮ್ಮೆ ಬಿಗಿದಪ್ಪಿ ಹೇಳಿಬಿಡು
ನಾ ನಿನ್ನ ಪ್ರೀತಿಸುವೆನೆಂದು, ಸಾಕಿನ್ನು ಈ ಹುಸಿಮುನಿಸು

ಬರುವೆಯಾ ನನ್ನೊಂದಿಗೆ ಈ ಬಾಳ ಪಯಣದಲಿ
ತೇಲಿಸುವೆಯಾ ಎನ್ನ ಮನವ ನಿನ್ನ ಪ್ರೀತಿಯ ಸಾಗರದಿ

ಕಾಯುತಿರುವೆ ನಿನಗಾಗಿ
ಹೆಚ್ಚು ಕಾಯಿಸಬೇಡ ಸೋತು ಹೋಗಿರುವ ಈ ಜೀವವ

( ಚಿತ್ರ ಸೆಲೆ: thebestshayaricollection.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: