ಓ ಪ್ರೇಮಾಂಜಲಿ…

 ಈರಯ್ಯ ಮಟದ.

ಬರಿದಾದ ಬಾಳಲ್ಲಿ ಬೆಳಕಾಗಿ ಬಂದೆ ನೀ
ನನ್ನ ಎದೆಯ ರಾಗಕೆ ನಿನ್ನ ಮಾತೆ ತಾಳವು
ಹುಸಿಯಾಗದೆ ಇನ್ನೂ ಹಸಿರಾಗಿದೆ ಜೀವವು

ಕಾಣದ ದೇವತೆಯಂತೆ ಕಲ್ಪನೆಯ ಲೋಕ ಮೀರಿ
ಕಸಿಮಾಡಿದೆ ಪ್ರೀತಿಯ ಕರುಣೆಯ ಕಂಗಳ ತುಂಬಿ
ನಿಜವಾಯಿತೀಗ ನನ್ನ ಕನಸಿನ ಓಲೆ.

ಜಾತಿ ಮತ ಬೇದಗಳು ಬರಲಿಲ್ಲ ಪ್ರೀತಿಯ ಮದ್ಯೆ
ನಿರ‍್ಮಲದ ಮನಸುಗಳಲ್ಲಿ ಕಹಿಬಾವ ಬರದಿನ್ನು
ಪ್ರೀತಿಯೆ ಗೆಲುವು ಇನ್ನು ಪ್ರೀತಿಯೆ ಜೀವವು

ಬಾಗ್ಯದ ಸಿರಿಯಲ್ಲಿ ಬಯಸಿದಂತೆ ನೀನು ಸಿಗಲು
ತೂಗುವ ಆಸೆ ನಿನ್ನ ನನ್ನ ಪ್ರೀತಿ ತೊಟ್ಟಿಲಿನಲ್ಲಿ
ತೋಳಲ್ಲಿ ಬಳಸಿ ನಿನ್ನ ಕಾಯುವೆ ಇನ್ನೆಂದು

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: