ಆಹಾ! ರುಚಿಕರ ಜೋಳದ ಮುದ್ದೆ

– ರೂಪಾ ಪಾಟೀಲ್.

ಬೇಕಾಗುವ ಅಡಕಗಳು

  • ಜೋಳದ ಹಿಟ್ಟು — 1 ಬಟ್ಟಲು
  • ಉಪ್ಪು — ರುಚಿಗೆ ತಕ್ಕಶ್ಟು
  • ನೀರು — 2 ಬಟ್ಟಲು
  • ಜೀರಿಗೆ — ಸ್ವಲ್ಪ
  • ಬೆಳ್ಳುಳ್ಳಿ — 4-5 ಎಸಳು
  • ಕರಿಬೇವು — 4-5 ಎಲೆ
  • ಒಗ್ಗರಣೆಗೆ ಸ್ವಲ್ಪ ಎಣ್ಣೆ.

ಮಾಡುವ ಬಗೆ

ಮೊದಲು ಒಗ್ಗರಣೆ ತಯಾರಿಸಲು ಸ್ವಲ್ಪ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕೊಂಚ ಬಿಸಿಯಾದ ಮೇಲೆ ಜೀರಿಗೆ, ಕರಿಬೇವಿನ ಎಲೆ, ಸ್ವಲ್ಪ ಕುಟ್ಟಿಕೊಂಡ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇವು ಬೆಂದ ಮೇಲೆ ಇದಕ್ಕೆ ನೀರು ಹಾಕಿಕೊಂಡು, ನೀರು ಸ್ವಲ್ಪ ಬಿಸಿಯಾದ ಮೇಲೆ ಅದಕ್ಕೆ ಜೋಳದ ಹಿಟ್ಟನ್ನು ಹಾಕಿ ಚೆನ್ನಾಗಿ ಗಂಟಿಲ್ಲದಂತೆ ತಿರುಗಿಸಿ. ನೀರು ತುಂಬಾ ಬಿಸಿಯಾದರೆ ಹಿಟ್ಟು ಹಾಕಿದ ಮೇಲೆ ಗಂಟಾಗುತ್ತದೆ. 5-6 ನಿಮಿಶದವರೆಗೆ ಸಣ್ಣ ಉರಿ ಇಟ್ಟು ಆಗಾಗ ತಿರುಗಿಸುತ್ತಿರಿ. ಬಲು ರುಚಿಯಾದ ಜೋಳ ಮುದ್ದೆ ಈಗ ತಯಾರು.

ಜೋಳದ ಮುದ್ದೆ ಮಕ್ಕಳಿಗೆ, ವಯಸ್ಸಾದವರಿಗೆ ತಿನ್ನಲು ಸವಿಯಶ್ಟೇ ಅಲ್ಲ, ಆರೋಗ್ಯಕ್ಕೆ ತುಂಬಾ ಹಿತಕರ ಕೂಡ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: