ನಂಬಿರುವುದು ನಾವೆಲ್ಲರೂ ನಿನ್ನನೇ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

 

ಬರದ ನಾಡಾಗಿದೆ ನಮ್ಮ ಕರ‍್ನಾಟಕ
ಬರದೆ ಮಳೆರಾಯ ಏನೀ ನಾಟಕ?

ನಿನಗಾಗಿ ಪರಿತಪಿಸುತಿಹನು ರೈತ ಹಗಲಿರುಳು
ಬೆಳೆ ಸಿಗದೆ ಹಾಕಿಕೊಳ್ಳುತಿಹನು ಉರುಳು

ಬೇಡವೆಂದರು ಅಲ್ಲೆಲ್ಲೋ ಉಕ್ಕಿ ಹರಿಯುತಿದೆ ನದಿಗಳು
ಆದರೆ ಬರಿದಾಗುತ್ತ ಬರುತಿದೆ ನಮ್ಮ ಕೆರೆ ಅಣೆಕಟ್ಟುಗಳು

ಜಾತಕಪಕ್ಶಿಯಂತೆ ಕಾಯುತಿಹಳು ಇಳೆ
ನೀ ಬರದೆ ಹೇಗೆ ಬರುವುದು ಬೆಳೆ

ಹೀಗೆ ಬಂದು ಹಾಗೆ ಹೋದರೆ ಸಾಲದು
ಆರ‍್ಬಟಿಸಿ ಬಂದರೆ ಮಾತ್ರ ಜೀವನ ಸಾಗುವುದು

ಸಕಲ ಜೀವರಾಶಿಗೂ ನೀನು ಬೇಕು
ದಯವಿಟ್ಟು ಹಾಕು ನಿನ್ನ ಕೋಪಕ್ಕೆ ಬ್ರೇಕು

ನೀರಿಗಾಗಿ ರಕ್ತಪಾತವಾಗುತದೆ ಸುಮ್ಮನೆ
ನಿನಗೆ ಕೆಟ್ಟ ಹೆಸರು, ಬರದಿದ್ದರೆ ಮಳೆರಾಯನೆ

ತಡ ಮಾಡದೆ ನಮ್ಮ ತಪ್ಪಾಗಿದ್ದರೆ ಮನ್ನಿಸು
ಬೇಗ ಕೆರೆ, ಕಟ್ಟೆ, ಬಾವಿ ತುಂಬಿಸು

ರೈತನಿಗೆ ಒಳ್ಳೆ ಬೆಳೆ ಬರಲಿ
ಅವನ ಮೊಗದಲಿ ಮಂದಹಾಸ ಮೂಡಲಿ

ಇದೇ ನನ್ನ ಮನದಾಳದ ಪ್ರಾರ‍್ತನೆ
ಬಂದು ಬಿಡು ಎಲ್ಲಿಯೂ ನಿಲ್ಲದೆ ಹಾಗೆ ಸುಮ್ಮನೆ
ನಂಬಿರುವುದು ನಾವೆಲ್ಲರೂ ನಿನ್ನನೇ

( ಚಿತ್ರ ಸೆಲೆ: youtube.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: