ಬಾಯಲ್ಲಿ ನೀರೂರಿಸುವ ಕೋಳಿ ಹುರುಕಲು

 ರೇಶ್ಮಾ ಸುದೀರ್.

ಬೇಕಾಗುವ ಸಾಮಾಗ್ರಿಗಳು:

ಶುಚಿ ಮಾಡಿದ ಕೋಳಿ ಮಾಂಸ – 1 ಕೆ.ಜಿ.
ನೀರುಳ್ಳಿ – 1
ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ
ರಿಪೈಂಡ್ ಎಣ್ಣೆ – 1 ಟೇಬಲ್ ಚಮಚ
ಸೋಯಾ ಸಾಸ್ – 3 ಟೇಬಲ್ ಚಮಚ
ಜೀರಿಗೆ ಮೆಣಸು – 30
ಹಸಿಮೆಣಸಿನಕಾಯಿ – 15
ಕಾಳು ಮೆಣಸಿನ ಪುಡಿ – 1 ಟೀ ಚಮಚ
ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ:

ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಎಣ್ಣೆಗೆ ಹೆಚ್ಚಿದ ಅತವಾ ಜಜ್ಜಿದ ಮೆಣಸು ಹಾಗೂ ಉದ್ದಕ್ಕೆ ಹೆಚ್ಚಿದ ನೀರುಳ್ಳಿಯನ್ನು ಹಾಕಿ, ಕೆಂಬಣ್ಣ ಬರುವವರೆಗೆ ಹುರಿಯಿರಿ. ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಶುಚಿ ಮಾಡಿದ ಕೋಳಿ ಹಾಕಿ ಅರಿಶಿನ ಮತ್ತು ಉಪ್ಪು ಹಾಕಿ. ಕೋಳಿ ನೀರು ಬಿಟ್ಟು ಆ ನೀರು ಆರಿದ ಮೇಲೆ ಒಂದು ಲೋಟ ನೀರು ಹಾಕಿ ಮಚ್ಚಳ ಮುಚ್ಚಿ. ನೀರು ಆರುತ್ತಾ ಬರುವಾಗ ಕಾಳುಮೆಣಸಿನ ಪುಡಿ, ಸೋಯಾ ಸಾಸ್ ಹಾಕಿ ಸಣ್ಣ ಉರಿಯಲ್ಲಿ ನೀರು ಆರಲು ಬಿಡಿ. ಅಶ್ಟೆ, ದಿಡೀರ್ ಕೋಳಿ ಹುರುಕಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: