ಬಿಡೆನು ನಿನ್ನ ಪಾದವ

– ಸುರಬಿ ಲತಾ.

ಬೊಂಬೆಯನು ಮಾಡಿ
ಪ್ರಾಣವನು ಅದರಲ್ಲಿ ತುಂಬಿ
ನಲಿವ ಮನುಜನ ನೋಡಿ
ನೀ ಅಲ್ಲಿ ನಿಂತು ನಲಿವೆ

ಪರೀಕ್ಶೆಗಳನು ಕೊಟ್ಟು
ಅದರಲಿ ನಿರೀಕ್ಶೆಗಳನು ಇಟ್ಟು
ಸೋತು ನರಳಿ ನೊಂದಾಗ
ಆಟವ ನೋಡಿ ನಗುವೆ

ಮನವನು ಉದ್ಯಾನವನವನಾಗಿ ಮಾಡಿ
ಮರುಕ್ಶಣವೇ ಮರುಬೂಮಿಯಾಗಿಸುವೆ
ಆಸೆಯೇ ದುಕ್ಕಕ್ಕೆ ಮೂಲವೆಂದು
ನೀ ನೋವ ಕೊಟ್ಟು ಪಾಟವ ಕಲಿಸುವೆ

ನಿನ್ನಾಟ ನಾನು ಬಲ್ಲೆನಯ್ಯ
ನಿನ್ನಲ್ಲಿ ಶರಣಾಗಿ ಬಂದೆನಯ್ಯ
ಕಾಪಾಡು ಹೇ ಮಾದವ
ಬಿಡೆನು ನಿನ್ನ ಪಾದವ

( ಚಿತ್ರ ಸೆಲೆ: blog.onlineprasad.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: