ಜೀವಾಮ್ರುತವ ಉಳಿಸಿದರೆ ನಾಡಿಗೆಲ್ಲ ಬೆಳಕು

– ಶಾಂತ್ ಸಂಪಿಗೆ.

ಕೆರೆ, ಬಾವಿ, ನದಿ, ಹಳ್ಳ ಎಲ್ಲಾ ಬತ್ತಿಹೋಗಿದೆ
ಕಾಡು, ತೋಪು, ಮರಗಳಿಲ್ಲ ಮಳೆಯೆ ಬಾರದಾಗಿದೆ

ಮೂಕ ಪ್ರಾಣಿ-ಪಕ್ಶಿಗಳಿಗೆ ನೀರು ದರೆಯಲ್ಲಿಲ್ಲ
ನೀರಿಲ್ಲದೆ ಕೊನೆ ಉಸಿರೆಳೆದಿವೆ ಜೀವರಾಶಿಯೆಲ್ಲಾ

ಬುದ್ದಿವಂತ ಜನರು ನಾವು ಯಾವ ಅರಿವು ಇಲ್ಲ
ಬೂಮಿ ಕೊರೆದು ಹುಡುಕುತ್ತೇವೆ ನೀರು ಎಲ್ಲೂ ಇಲ್ಲ

ಗಿಡ ಮರಕೆ ಕೊಳ್ಳಿ ಇಟ್ಟು ಕಟ್ಟಿದ್ದೇವೆ ನಾಡು
ಮಳೆಯಿಲ್ಲದೆ ಕ್ಶೀಣಿಸಿದೆ ನಮ್ಮ ಬವಿಶ್ಯದ ಬೀಡು

ಆಸ್ತಿಗಾಗಿ ಕೆರೆಯ ಮುಚ್ಚಲು ನೀಡುತ್ತೇವೆ ಬೆಂಬಲ
ಎಲ್ಲಾ ಪ್ರಾಣಿ-ಪಕ್ಶಿ ಕೊಂದು ಮುನ್ನುಗ್ಗುವ ಹಂಬಲ

ಇನ್ನಾದರು ಮುಂದೆ ಬನ್ನಿ ಗಿಡಮರವ ಬೆಳೆಸಲು
ಊರಿಗೊಂದು ಕೆರೆಯ ಕಟ್ಟಿ ಜೀವರಾಶಿ ಉಳಿಸಲು

ಪ್ರಾಣಿ-ಪಕ್ಶಿ ಜನರಿಗೆಲ್ಲಾ ಜೀವ ಜಲವೇ ಆಶ್ರಯ
ಮಿತಬಳಕೆಗೆ ಒತ್ತುನೀಡಿ, ಇದುವೆ ನಮ್ಮ ಸದಾಶಯ

ಮಳೆಯ ನೀರನು ಹಿಡಿದಿಟ್ಟರೆ ಮಾತ್ರ ನಮಗೆ ಬದುಕು
ಜೀವಾಮ್ರುತವ ಉಳಿಸಿದರೆ ನಾಡಿಗೆಲ್ಲ ಬೆಳಕು

(ಚಿತ್ರ ಸೆಲೆ: fairobserver.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: