‘ಪಡ್ಡು’ – ಬೆಳಿಗ್ಗೆಗೂ ಸೈ, ಸಂಜೆಗೂ ಸೈ

– ಪ್ರತಿಬಾ ಶ್ರೀನಿವಾಸ್.

ಬೇಕಾಗುವ ಸಾಮಗ್ರಿಗಳು

ಅಕ್ಕಿ – ಲೋಟ
ಉದ್ದಿನ ಬೇಳೆ – 1/2 ಲೋಟ
ದಪ್ಪ ಅವಲಕ್ಕಿ – 1/4 ಲೋಟ
ಮೆಂತ್ಯ – 1 ಚಮಚ
ಈರುಳ್ಳಿ – 2
ಹಸಿಮೆಣಸು – 4-5
ಶುಂಟಿ – 1 ಇಂಚು
ಕಾಯಿತುರಿ – 1 ಕಪ್
ಕೊತ್ತಂಬರಿ ಸೊಪ್ಪು – 1/2 ಕಟ್ಟು

ಮಾಡುವ ಬಗೆ

ಅಕ್ಕಿ, ಉದ್ದಿನ ಬೇಳೆ, ಅವಲಕ್ಕಿ, ಮೆಂತ್ಯ ಇಶ್ಟನ್ನು ಚೆನ್ನಾಗಿ ತೊಳೆದು, 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದನ್ನು ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ರುಬ್ಬಿಕೊಳ್ಳಿ. ರಾತ್ರಿಯಿಡೀ ಹಿಟ್ಟನ್ನು ಹಾಗೆ ಇಟ್ಟು ಮರುದಿನ ಬೆಳ್ಳಿಗೆ ಉಪ್ಪನ್ನು ಸೇರಿಸಿ. ನಂತರ ಈರುಳ್ಳಿ, ಹಸಿಮೆಣಸು, ಶುಂಟಿ, ಕೊತ್ತಂಬರಿ ಸೊಪ್ಪನ್ನು (ಬೇಕಾದಲ್ಲಿ ಸಬ್ಬಸಿಗೆ ಸೊಪ್ಪನ್ನು ಸೇರಿಸಬಹುದು) ಸಣ್ಣಗೆ ಹೆಚ್ಚಿಕೊಂಡು, ರುಬ್ಬಿದ ಮಿಶ್ರಣಕ್ಕೆ ಹಾಕಬೇಕು. ಕಾಯಿತುರಿಯನ್ನು ಸೇರಿಸಿಕೊಂಡರೆ ಪಡ್ಡಿನ ಹಿಟ್ಟು ತಯಾರು.

ಪಡ್ಡಿನ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲು ಬೇಯಿಸಿದರೆ, ಬಿಸಿಬಿಸಿ ಪಡ್ಡು ಸವಿಯಲು ತಯಾರು. ಇದನ್ನು ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: