ಇದುವೆ ನನ್ನ ಕೋರಿಕೆ

– ಸುರಬಿ ಲತಾ.

ಪ್ರೀತಿಯ ಹೆಸರು ಪ್ರೀತಿಯೇ ಗೆಳೆಯ
ಮುನಿದಾಕ್ಶಣ ಕರಗಿ ಹೋಗದು
ಮುಕ ತಿರುಗಿಸಿ ಕುಳಿತಾಕ್ಶಣ ಬಾಡದು

ಅತೀ ಒಲವು ಬಯಸುವುದು
ಸಿಗದಾಗ ಸಿಡುಕುವುದು ಸಹಜ
ಮನಸು ಬಯಕೆಗಳ ಕಣಜ

ಹ್ರುದಯಗಳ ನಡುವೆ ಬಿರುಕು
ಬಿಡುವ ಮುನ್ನ ಸರಿಪಡಿಸಿಕೊಳ್ಳದೆ
ನಾನೇ ಹೆಚ್ಚು ಎಂಬ ಬಾವ ತರವಲ್ಲ

ತಪ್ಪುಗಳು ಒಪ್ಪಿಕೊಂಡಾಕ್ಶಣ
ಸಣ್ಣವ ನೀನಾಗಲಾರೆ
ಕ್ಶಮಿಸಿದಾಕ್ಶಣ ಪರಿಶುದ್ದ ನಾನಾಗಲಾರೆ

ಮನಸಾಕ್ಶಿಯೊಂದೇ ಕೊನೆಗೆ
ಬರುವುದು ನಮ್ಮ ಜೊತೆಗೆ
ಒಮ್ಮೆ ಚಿಂತಿಸು ಇದು ನನ್ನ ಕೋರಿಕೆ

(ಚಿತ್ರ ಸೆಲೆ: pixabay.com)

ಇವುಗಳನ್ನೂ ನೋಡಿ

1 ಅನಿಸಿಕೆ

  1. bhima bhima says:

    ತುಂಬ ಚೆನ್ನಾಗಿ ವಿವರಿಸಿದ್ದಿರಿ😊

ಅನಿಸಿಕೆ ಬರೆಯಿರಿ: