ನಿನ್ನ ಒಂದು ಮಾತು

– ರಂಜಿತಾ ವೈ. ಎಂ.

ನಿನ್ನ ಒಂದು ಮಾತು ಸಾಕು
ಹಗಲು ಇರಳು ಮರೆಯುವುದು ನನ್ನ ಮನಸು

ನಿನ್ನ ಒಂದು ಮಾತು ಸಾಕು
ಕುಣಿಯುವುದು ನನ್ನ ಮೌನ ತುಂಬಿದ ಮನಸು

ನಿನ್ನ ಒಂದು ಮಾತು ಸಾಕು
ನನಗರಿವಿಲ್ಲದೆ ನನ್ನ ಮನಸು ಸೇರುವುದು ನಿನ್ನ ಮನಸು

ನಿನ್ನ ಒಂದು ಮಾತು ಸಾಕು
ನನ್ನ ಕಪ್ಪು ಬಿಳುಪು ಕನಸಿಗೆ ಬಣ್ಣ ತುಂಬುವುದು ಮನಸು

ನಿನ್ನ ಒಂದು ಮಾತು ಸಾಕು
ಆನಂದದ ಬಾಶ್ಪದಿಂದ ತುಂಬುವುದು ಮನಸು

ನಿನ್ನ ಮಾತು
ನನ್ನ ಮನಸಿಗೆ ಸ್ಪೂರ‍್ತಿ

(ಚಿತ್ರ ಸೆಲೆ: pixabay.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: