ಸುಂದರ ಕ್ಶಣಗಳ ಆಗರ ಈ ಬದುಕು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಸುಂದರ ಕ್ಶಣಗಳ ಆಗರ ಈ ಬದುಕು
ನೋವಿನ ನೆನಪು ಇಲ್ಲಿ ಏಕಿರಬೇಕು?
ಎಲ್ಲವ ಮರೆತು ಮುನ್ನಡೆದರೆ ಆಯಿತು
ಬಾಳೊಂದು ಸುಂದರ ಉದ್ಯಾನ ಆದೀತು

ಕಶ್ಟಗಳು ಯಾರಿಗಿಲ್ಲ ಸ್ವಾಮಿ
ಮೆಟ್ಟಿನಿಂತರೆ ಸ್ವರ‍್ಗವೇ ಈ ಬೂಮಿ
ಪ್ರತಿ ದಿನವು ಆಗಿರಲಿ ವಿಜಯದಶಮಿ
ಸಾದಿಸಬೇಕು ಸೇರುವ ಮುಂಚೆ ರುದ್ರಬೂಮಿ

ಯಾರಿದ್ದರೇನು ಜೊತೆಯಲಿ ಕಶ್ಟ ಬಂದಾಗ
ಸಾಗುತಲೇ ಇರಬೇಕು ಜೀವನ ಸರಾಗ
ತಿಳಿದರೆ ಜೀವನ ಕಹಿ ಸತ್ಯ ಬೇಗ
ತಡೆಯುವರಾರು ನಮ್ಮ ಕಡೆ ಬರುವ ಯೋಗ

( ಚಿತ್ರ ಸೆಲೆ: godlights.me )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.