ದೀವಳಿಗೆಯ ಸಾಲುಗಳು

 ಪ್ರವೀಣ್  ದೇಶಪಾಂಡೆ.

ಮಣ್ಣ ಹಣತೆ
ಮನದವಕಾಶ,
ಮಾಯೆ ಹತ್ತಿಯ
ಹೊಸೆದ
ಅಗ್ನಾನದ ಬತ್ತಿ
ಗ್ನಾನ ತೈಲ.

ಎಲ್ಲ ಇನ್ನಿಲ್ಲದಂತೆ
ಉರಿದೆಡೆ
ಇಹುದು
ಅರಿವ ಜ್ಯೋತಿ

ದೀಪದ ಕೆಳಗೆ
ಕತ್ತಲೇ,
ಅದಿಲ್ಲದಿರೆ
ಇದೆಂತು
ಹೊಳೆಯುತ್ತಿತ್ತು?
ಏನ
ಬೆಳಗುತಿತ್ತು?

*******************

ಸಟ್ಟಂತ ಸುಡುವ
ಅಸಹನೆಯನ್ನೂ
ಪಟಾಕಿಯಂತೆ
ಸಿಡಿಸುವಂತಿದ್ದರೆ
ಚೆನ್ನಿತ್ತು.

ಹಗುರ
ಹಾಳೆ ಉಳಿದು
ಹಾರಾಡುತ್ತಿದ್ದೆವು
ಜೀವುಕದ
ಹಾದಿ ಬದಿ,
ದೀವಳಿಗೆಯ ಕೊನೆಗೆ

( ಚಿತ್ರ ಸೆಲೆ: hdnicewallpapers.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: