ಜೀವನವೆಂಬುದು ಬೇವು ಬೆಲ್ಲಗಳ ಬೆಸುಗೆ…

– ಅನುಪಮಾ ಜಿ.

ಜೀವನವೆಂದರೆನೇ ಸಿಹಿ ಕಹಿಯ ಮಿಶ್ರಣ. ಜೀವನವನ್ನು ಒಂದು ನಾಣ್ಯಕ್ಕೆ ಹೋಲಿಸಿದರೆ ಸುಕ ಮತ್ತು ದುಕ್ಕ ಆ ನಾಣ್ಯದ ಎರಡು ಮುಕಗಳಿದ್ದಂತೆ. ಮನುಶ್ಯ ತನ್ನ ಜೀವನದಲ್ಲಿ ಬರಿ ಸುಕವನ್ನಶ್ಟೇ ಅನುಬವಿಸಲಾರ. ಇನ್ನೂ ಹೇಳಬೇಕೆಂದರೆ ಬರೀ ಸುಕ ಮಾತ್ರ ಇದ್ದಲ್ಲಿ ಜೀವನ ಬೇಸರ ಬರುತ್ತದೆ. ಅದೇ ರೀತಿ ಬರೀ ದುಕ್ಕದಿಂದಲೇ ಕೂಡಿದ್ದರೆ ಅದು ಕೂಡ ಬೇಸರ ತರುತ್ತದೆ. ಆದ್ದರಿಂದ ಈ ಎರಡೂ ಇದ್ದರೆ ಮಾತ್ರ ನಮ್ಮ ಜೀವನಕ್ಕೆ ಒಂದು ಅರ‍್ತ.

ಉದಾಹರಣೆಗೆ ಒಬ್ಬ ವಿದ್ಯಾರ‍್ತಿ ತರಗತಿಯಲ್ಲಿ ಮೊದಲ ಸ್ತಾನವನ್ನೇ ಗಳಿಸಿಕೊಂಡು ಬಂದರೆ ಅವನಿಗೆ ಕೊನೆಯ ಸ್ತಾನದ ಬಗ್ಗೆ ಅರಿವಿರುವುದಿಲ್ಲ ಮತ್ತು ಆ ಪ್ರತಮ ಸ್ತಾನದ ಬೆಲೆ ಕೂಡ ತಿಳಿಯುವುದಿಲ್ಲ. ಒಬ್ಬ ಕೊನೆಯ ಸ್ತಾನ ಗಳಿಸುವ ವಿದ್ಯಾರ‍್ತಿ ಪ್ರತಮ ಸ್ತಾನ ಪಡೆದರೆ ಅವನಿಗೆ ಕೊನೆಯ ಸ್ತಾನದಲ್ಲಿದ್ದಾಗ ಜನಗಳಾಡುವ ಚುಚ್ಚು ಮಾತು, ನೋವು ಇವೆಲ್ಲದರ ಅನುಬವ ಸಿಕ್ಕಿರುತ್ತದೆ ಮತ್ತು ಪ್ರತಮ ಸ್ತಾನದ ಬೆಲೆಯೂ ಚೆನ್ನಾಗಿ ತಿಳಿದಿರುತ್ತದೆ. ಹಾಗೆಂದು ಎಲ್ಲ ವಿದ್ಯಾರ‍್ತಿಗಳು ಕೊನೆಯ ಸ್ತಾನ ಪಡೆಯಬೇಕೆಂದು ಅಲ್ಲ.

ಜೀವನದಲ್ಲಿ ನೋವಿನ ಅನುಬವ ನಲಿವಿನಶ್ಟೇ ಮುಕ್ಯ. ಪ್ರತಿಯೊಬ್ಬ ವ್ಯಕ್ತಿಗೂ ತಾನು ಬಯಸಿದ್ದೆಲ್ಲಾ ಸುಲಬವಾಗಿ ಸಿಕ್ಕಿಬಿಟ್ಟರೆ ಅದರ ಬೆಲೆ ಎಂದಿಗೂ ತಿಳಿಯುವುದಿಲ್ಲ. ಅದೇ ತಾನು ಬಯಸಿದ್ದನ್ನು ಪಡೆಯಲು ಕಶ್ಟಪಟ್ಟರೆ , ಅದು ದಕ್ಕಿದಾಗ ಆಗುವ ಸಂತೋಶ ಅಪಾರ. ನಾವು ನಮ್ಮ ಜೀವನದಲ್ಲಿ ಬಹಳಶ್ಟು ಮಹಾನ್ ವ್ಯಕ್ತಿಗಳ ಕತೆಗಳನ್ನು ಓದುತ್ತೇವೆ. ಅವರೆಲ್ಲರಿಗೂ ಅವರು ಬಯಸಿದ್ದು ಸುಲಬವಾಗಿ ಸಿಕ್ಕಿದ್ದರೆ ಬಹುಶ ಅವರು ಈಗ ನಮ್ಮ ಮುಂದೆ ಕತೆ ರೂಪದಲ್ಲಿ ಉಳಿಯುತ್ತಿರಲಿಲ್ಲ. ವಿಚಿತ್ರವೆಂದರೆ ಹುಟ್ಟಿದ ಮಗು ಮೊದಲು ಅಳದಿದ್ದರೆ ನಾವು ಮರುಕ ಪಡುತ್ತೇವೆ, ಅದೇ ಅತ್ತರೆ ನಾವು ಸಂತಸ ಪಡುತ್ತೇವೆ. ಅದೇ ಸ್ರುಶ್ಟಿಯ ನಿಯಮ.

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏಳು ಬೀಳುಗಳನ್ನು ಅನುಬವಿಸುತ್ತಾರೆ. ಅದರಿಂದ ಪಾಟ ಕಲಿಯುತ್ತಾರೆ, ಮತ್ತೆ ಮುಂದೆ ಸಾಗುತ್ತಾರೆ. ಜೀವನವೇ ಒಂದು ಚಕ್ರದಂತೆ ಒಮ್ಮೆ ಸಂತೋಶ ಸಿಕ್ಕರೆ ಮತ್ತೊಮ್ಮೆ ದುಕ್ಕ. ಇದು ನಿರಂತರ, ಅದುವೇ ಜಗದ ನಿಯಮ. ಅದೇ ರೀತಿ ಜೀವನದಲ್ಲಿ ಸುಕ ಮತ್ತು ದುಕ್ಕಕ್ಕೆ ಸಮಪಾಲು. ನೋವುಗಳಿಗಿಂತ ಹೆಚ್ಚಾಗಿ ಅದರಿಂದ ಕಲಿತ ಪಾಟಗಳು ಮುಕ್ಯವಾಗುತ್ತವೆ. ನೋವುಗಳಿಗೂ ಕೂಡ ಒಂದು ದನ್ಯವಾದ ಹೇಳಬೇಕು, ಏಕೆಂದರೆ ಅದರಿಂದ ತಾನೇ ನಮ್ಮ ಸಾಮರ‍್ತ್ಯ, ಕಶ್ಟಗಳನ್ನು ಎದುರಿಸುವ ಬಗೆ ತಿಳಿಯುವುದು.

ಬೇವು ಬೆಲ್ಲ ಜೀವನದಲ್ಲಿ ಸರಿಯಾದ ಪ್ರಮಾಣದಲ್ಲಿದ್ದರೆ ಜೀವನ ಸ್ವಾರಸ್ಯ ಕರವಾಗಿರುತ್ತದೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: