ಪ್ರೀತಿಸೋಣ ಜಗವ ಮರೆತು

– ಸುಹಾಸ್ ಮೌದ್ಗಲ್ಯ.

ಕೊಡುವೆ ನನ್ನ ಹ್ರುದಯದ ಜಾಹೀರಾತು
ಅರೆಕ್ಶಣ ನೋಡು ಅದನು ನೀ ಕುಳಿತು
ಮಾಡುವೆ ನಾನು ನಿನ್ನವನೆಂದು ಸಾಬೀತು
ಕಣ್ಣುಗಳ ವಹಿವಾಟೆ ಅದಕೆ ರುಜುವಾತು

ಆಡುತ ಮನದ ಎಲ್ಲ ಸಿಹಿ ಮಾತು
ನಿನ್ನ ಎದುರಿಗೆ ತುಸು ನಗುತ ಕೂತು
ಮಾಡುವೆ ನಾ ನಿನಗೆ ತಾಕೀತು
ನಕ್ಕಿಬಿಡು ಒಮ್ಮೆ ನೀ ನನಗೆ ಸೋತು

ಮನವು ಬರೆಯಿತು ಹಾಡೊಂದ ನಿನ್ನ ಕುರಿತು
ಪ್ರತಿ ಸಾಲಿನಲ್ಲೂ ಇರದು ಏನೂ ನಿನ್ನ ಹೊರತು
ತಾನಾಗೇ ಪ್ರೀತಿಯ ಹೊಸ ರಾಗ ಮೂಡಿತು
ಮನದ ಕೋಗಿಲೆ ಕುಶಿಯಿಂದ ಹಾಡಿತು

ಕಣ್ಣ ಕಣ್ಣ ಹೊಸ ಬಾಶೆಯ ಅರಿತು
ಸಣ್ಣ ಸಣ್ಣ ಪ್ರೇಮ ಪಾಟವ ಕಲಿತು
ಹಾಲು ಜೇನಿನಂತೆ ಬೆರೆತು
ಪ್ರೀತಿಸೋಣ ಜಗವ ಮರೆತು

(ಚಿತ್ರ ಸೆಲೆ: pixabay.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: