ಮರೆತಿದ್ದೇವೆ ನಾವು ಮರೆತಿದ್ದೇವೆ

ಅಮಾರ‍್ತ್ಯ ಮಾರುತಿ ಯಾದವ್

ಬೀಸುವ ಕಲ್ಲಿನ ರಬಸವನ್ನು
ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು
ರಂಟೆ ಕುಂಟೆಗಳ ನಂಟನ್ನು
ಮರೆತಿದ್ದೇವೆ ನಾವು ಮರೆತಿದ್ದೇವೆ

ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು
ಗರತಿಯರ ಬಾಯಲ್ಲಿ ಬರುವ ಜನಪದ ಹಾಡುಗಳನ್ನು
ಡೊಳ್ಳು ಕುಣಿತ ವೀರಗಾಸೆಯಂತಹ ಕಲೆಗಳನ್ನು
ಮರೆತಿದ್ದೇವೆ ನಾವು ಮರೆತಿದ್ದೇವೆ

ಅಜ್ಜ ಅಜ್ಜಿಯರು ಕತೆ ಹೇಳುವ ರೀತಿಗಳು
ಹಬ್ಬ ಹರಿದಿನಗಳಲ್ಲಿನ ಆಟೋಟಗಳು
ದೊಡ್ಡಾಟ ಬಯಲಾಟ ನಾಟಕಗಳು
ಮರೆತಿದ್ದೇವೆ ನಾವು ಮರೆತಿದ್ದೇವೆ

( ಚಿತ್ರ ಸೆಲೆ:  wikimedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: