ಮೆಂತೆ ಸೊಪ್ಪಿನ ಬಾತ್: ಮಾಡಲು ತುಂಬಾ ಸರಳ
– ಕಲ್ಪನಾ ಹೆಗಡೆ.
ಬೆಳಗೆದ್ದ ತಕ್ಶಣ ಎದುರಾಗುವ ಪ್ರಶ್ನೆ: ತಿನ್ನೋಕೆ ಬಲು ಬೇಗನೆ ಮಾಡುವಂತದ್ದು ಇವತ್ತು ಏನು ಮಾಡೋದು? ಮೆಂತೆ ಸೊಪ್ಪಿನ ಬಾತ್ ಈ ಪ್ರಶ್ನೆಗೆ ಉತ್ತರವಾಗಬಲ್ಲುದು 🙂 ಮೆಂತ್ಯ ಸೊಪ್ಪು ಆರೋಗ್ಯಕ್ಕೂ ಒಳ್ಳೇದು. ಹಾಗೆಯೇ ಇದನ್ನು ಕೋಸು/ದೊಣ್ಣೆಮೆಣಸಿನಕಾಯಿ/ಎಲ್ಲಾ ತರಕಾರಿಗಳ ಮಿಕ್ಸ್ ನಿಂದಲೂ (ಗಜ್ಜರಿ, ಹುರುಳಿಕಾಯಿ, ಬಟಾಣಿ ಕಾಳು) ಯಿಂದಲೂ ಮಾಡಬಹುದು.
ಏನೇನು ಬೇಕು?
2 ಪಾವು ಅಕ್ಕಿ
1 ಮೆಂತ್ಯ ಸೊಪ್ಪಿನ ದೊಡ್ಡ ಕಟ್ಟು
1 ಚಮಚ ಜೀರಿಗೆ
5 ಹಸಿಮೆಣಸಿನಕಾಯಿ
1 ಚಮಚ ಗರಮ್ ಮಸಾಲೆ ಪುಡಿ
ರುಚಿಗೆ ತಕ್ಕಶ್ಟು ಉಪ್ಪು
ಎಣ್ಣೆ
ಮಾಡುವ ಬಗೆ:
- ಮೊದಲು ಅಕ್ಕಿಯನ್ನು ತೊಳೆದು ಕುಕ್ಕರಿನಲ್ಲಿ ಒಂದು ಪಾವಿಗೆ ಒಂದೂವರೆ ಕಪ್ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.
- ಅನಂತರ ಮೆಂತ್ಯಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ.
- ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಕಾದಬಳಿಕ ಹೆಚ್ಚಿದ ಹಸಿಮೆಣಸಿನಕಾಯಿ, ಜೀರಿಗೆ, ಗರಮ್ ಮಸಾಲೆ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ಹೆಚ್ಚಿದ ಮೆಂತ್ಯಸೊಪ್ಪನ್ನು ಹಾಕಿ.
- ಆಮೇಲೆ, ಅಂದರೆ ಸ್ವಲ್ಪ ಬಿಸಿ ಕಡಿಮೆ ಆದ ಬಳಿಕ ಅನ್ನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನೀವು ತಯಾರಿಸಿದ ಮೆಂತ್ಯಸೊಪ್ಪಿನ ಬಾತ್ ಅನ್ನು ತಟ್ಟೆಗೆ ಹಾಕಿ ಸವಿಯಲು ನೀಡಿ 🙂
ಇತ್ತೀಚಿನ ಅನಿಸಿಕೆಗಳು