ನಿಶಾಚರಿ ಪ್ರಾಣ ನಾನು

– ಬರತ್ ರಾಜ್. ಕೆ. ಪೆರ‍್ಡೂರು.

ಬಾಳಪತವಿದೆ ಕಣ್ಣ ಮುಂದೆ…
ಅದೆಶ್ಟೋ ವಾಹನ ಸವಾರರು
ಗುರಿ ತಲುಪಲು ಓಡುತ್ತಿಹರು
ಮತ್ತೆ ಕೆಲವರು ಸುತ್ತುತ್ತಿಹರು
ವ್ರುತ್ತದಲ್ಲಿ ದಾರಿ ಕಾಣದೆ..!

ಗಾಜಿನ ಬಹುಮಹಡಿ
ಕಟ್ಟಡದಿ ಬಂದಿ ನಾನು
ನನಗಿಂದು ಕಾಣದು
ಬಾವನೆಯ ಯಾವ ಏಣಿ..!

ಹೇಗೆ ನಾ ಇಳಿದುಬಂದು
ದಾರಿಕಾಣದವರ ನೆರವಾಗಲಿ?
ಮಾತು ಬರದ ಮೌನಿ ನಾನು..
ನನಗೇಕೋ ಗಾಂದಾರಿಯಂತೆ
ನಿಯತ್ತಿನ ಪಟ್ಟಿ ಕಣ್ಣಕಟ್ಟಿದೆ,
ಬೆಳಕಲ್ಲಿದ್ದರೂ ಕತ್ತಲಂತೆ
ಬಾಸವಾಗಿದೆ…!

ಬೆಳಗೆದ್ದು ಕತ್ತಲಕೋಣೆಯಲ್ಲಿ
ಬೆಳಕಿನ ಚಿಂತೆಯ ಚಿತೆಯಲ್ಲಿ
ಉರಿವ ಹೆಣ ನಾನು,
ರಾತ್ರಿ ಬೆಳದಿಂಗಳಲ್ಲಿ ರವಿಗೆ
ಗೊಣಗುವ ಗುಣ ನಾನು!
ಮದ್ಯಾಹ್ನವೇ ನಡುರಾತ್ರಿ
ಬಯಸುವ ನಿಶಾಚರಿ ಪ್ರಾಣ ನಾನು..!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: