ಕನಸ ಮರ ವಿಶ್ವಾಸದ ಗೊಬ್ಬರವಿಲ್ಲದೆ ಸೊರಗುತ್ತಿದೆ

– ಬರತ್ ರಾಜ್. ಕೆ. ಪೆರ‍್ಡೂರು.

Introspection, ಆತ್ಮವಿಮರ‍್ಶೆ

ಕನಸ ಮರ ಮೊಳಕೆಯೊಡೆಯುತ್ತಿದೆ
ವಿಶ್ವಾಸದ ಗೊಬ್ಬರವಿಲ್ಲದೆ ಸೊರಗುತ್ತಿದೆ,
ಇತಿಹಾಸ ಸ್ರುಶ್ಟಿಸುವ ಬದಲು
ಕರಗಿಹೋದ ಪುಟದಲ್ಲೇನೊ
ಮನ ಹುಡುಕಿ ತಿರುಚುತ್ತಿದೆ?
ಶಕುನದ ಹಕ್ಕಿಗೆ
ದೇವರ ಪಟ್ಟ ಕಟ್ಟಿದಂತಿದೆ
ಮನ ಬಲಿತಿದೆ, ಕನಸು ಸೋಲುತ್ತಿದೆ!

ಹಾಡುವ ಕೋಗಿಲೆಯ ಅರಿಯದೆ
ಅದರ ಅಂದ ವಿಮರ‍್ಶಿಸ ಹೊರಟ
ಒರಟ ಅಂದ ನಾನು!
ನಾನೇನು ಪಂಚರಂಗಿ ಗಿಳಿಯಲ್ಲ,
ಕತ್ತಲಲ್ಲಿ ನನ್ನ ಪುಕ್ಕದ ಅಂದಕ್ಕೆ
ಮಾರುಹೋದವ ನಾನು!
ರೆಕ್ಕೆಯಿದ್ದು ಹಾರಲಾಗದ
ಉಳ್ಳವರ ಬಾಯಿ ಚಪಲಕ್ಕೆ
ಸಾಯುವ ಕೋಳಿ ನಾನು!

ಬಾನೆತ್ತರದಿ ಹಾರುತ್ತಿರುವ
ಹದ್ದಿನಂತ ಸೂಕ್ಶ್ಮ ಕಣ್ಣಿಲ್ಲ ನನಗೆ,
ದಬ್ಬಾಳಿಕೆಯ ಒದ್ದು ಎದ್ದು ನಿಲ್ಲುವ
ಗಂಡೆದೆಯೊಂದಿದೆ ನನಗೆ!
ಅಮವಾಸ್ಯೆ ಕತ್ತಲಲ್ಲಿ
ಕೊಳದ ನೀರಲ್ಲಿ ತೇಲುವ
ತಾವರೆ ಎಲೆ ಮೇಲೆ
ಅವಕಾಶ ಬೇಟೆಗೆ
ಕಾದು ಕುಳಿತ
ನಿಶಾಚರ ಪ್ರಾಣ ನಾನು!

(ಚಿತ್ರ ಸೆಲೆ: lonerwolf.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: