ಕಾದಿದ್ದೆ ನಾ ನಿನ್ನ ಬರುವಿಕೆಗಾಗಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ತಿಂಗಳ ಬೆಳಕಿನ ಸಂಜೆಯಲ್ಲಿ
ಸದ್ದು ಮಾಡದೆ ಬೀಸುವ ಗಾಳಿಯಲ್ಲಿ

ಅತ್ತಿತ್ತ ಓಲಾಡುವ ಮರಗಳ ಜೊತೆಯಲಿ
ಯಾರೂ ಓಡಾಡದ ದಾರಿಯಲಿ

ಕುಳಿತಿದ್ದೆ ಜೀರುಂಡೆ ಶಬ್ದದ ರಾತ್ರಿಯಲಿ
ನನ್ನೆಲ್ಲ ನೋವ ಬಿಚ್ಚಿಡುವ ಮನಸ್ಸಿನಲಿ

ನನ್ನ ತಪ್ಪುಗಳ ತಿಳಿಸುವ ಸಂಕಲ್ಪದಲಿ
ಎಲ್ಲಾ ಅಳಿಸಿ ಹೊಸ ಜೀವನದ ನಂಬಿಕೆಯಲಿ

ಕಾದಿದ್ದೇ ಆಯಿತು ಆ ಹೊತ್ತು ನಿನ್ನ ಬರುವಿಕೆಯಲಿ
ಸೋತಿದ್ದೆ ನಾನು ನನ್ನ ನಿರೀಕ್ಶೆಯಲ್ಲಿ

ಹೊರಟು ನಡೆದೆ ಹೊತ್ತು ಬಾರವಾದ ಹ್ರುದಯದಲಿ
ಬದುಕುವುದು ಇದೆಯಲ್ಲ ಅದೇ ಏಕಾಂತದಲಿ
ಮಗ್ನನಾದೆ ಬಾವನೆಗಳ ಹಿಡಿದಿಡಲು ನನ್ನ ಕವಿತೆಯಲಿ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: