ಮರೆಯಾದ ನಟ-ನಿರ‍್ದೇಶಕ ಕಾಶಿನಾತ್

ವೆಂಕಟೇಶ್ ಯಗಟಿ.

ಕಾಶಿನಾತ್, Kashinath

ಕಾಶಿನಾತ್ ಎಂದಾಗ, ತಕ್ಶಣ ನೆನಪಾಗೋದು ಅವರ ಪೇಲವ ದೇಹ ಹಾಗು ಅನುಬವ ಚಿತ್ರ. ಅಂದಿನ ಕಾಲಕ್ಕದು ಅತ್ಯಂತ ಬೋಲ್ಡ್ ಚಿತ್ರ. ಆಗಿನ ಚಿತ್ರಗಳ ಮಡಿವಂತಿಕೆಯನ್ನು ಮುರಿದ ಚಿತ್ರಕ್ಕೆ ಜೈಕಾರ ಹಾಕಿದ ವರ‍್ಗ ಒಂದೆಡೆಯಾದರೆ, ಆ ಚಿತ್ರವನ್ನು ಕಂಡಿಸಿ ಹೀಗಳೆದವರೂ ಇದ್ದರು. ಅದೇ ಚಿತ್ರದ ಮೂಲಕ ವಿ.ಮನೋಹರ್ ಎಂಬ ಸಂಗೀತ ನಿರ‍್ದೇಶಕರನ್ನು ಪರಿಚಯಿಸುತ್ತಾರೆ ಕಾಶಿನಾತ್.

ಅನಾಮಿಕ, ಮನ್ಮತರಾಜ, ಚಪಲ ಚೆನ್ನಿಗರಾಯ, ಪೋಲಿ ಕಿಟ್ಟಿ, ಲವ್ ಟ್ರೈನಿಂಗ್, ಚೋರ ಗುರು ಚಂಡಾಲ್  ಶಿಶ್ಯ, ಲವ್ ಮಾಡಿ ನೋಡು, ಅವಳೇ ನನ್ನ ಹೆಂಡತಿ, ಅವನೇ ನನ್ನ ಗಂಡ, ಸುರಸುಂದರಾಂಗ, ಇತ್ತೀಚಿನ ಜೂಮ್, ಚೌಕ – ಇವೆಲ್ಲಾ ಕಾಶಿನಾತರ ಜನಪ್ರಿಯ ಚಿತ್ರಗಳು. ತಮ್ಮ ಸಿನೆಮಾಗಳಲ್ಲಿನ ತಿಳಿಹಾಸ್ಯದ ಮೂಲಕ ಸಮಾಜಕ್ಕೊಂದು ಸಂದೇಶ ನೀಡುವ ಪ್ರಯತ್ನ ಮಾಡುತ್ತಿದ್ದರೂ, ಅವರು ಅಶ್ಟೇ ನಿರ‍್ಲಕ್ಶ್ಯಕ್ಕೊಳಗಾದದ್ದೂ ಕೂಡ ನಿಜ.

ಜನರನ್ನು ಮುಜುಗರಕ್ಕೆ ಸಿಲುಕಿಸುವ ದ್ರುಶ್ಯ ಸಂಬಾಶಣೆಗಳಿದ್ದರೂ ಅದರ ಅರ‍್ತವನ್ನು ಆಳವಾಗಿ ಮೆದುಳಿಗೆ ಇಳಿಸುವ ಸಾಮರ‍್ತ್ಯ ಕಾಶಿನಾತ್  ಅವರಿಗಿತ್ತು. ಹಲವು ವರ‍್ಗದ ಜನರಿಗೆ ಜೀರ‍್ಣಿಸಿಕೊಳ್ಳಲಿದು ಕಶ್ಟವಾದರೂ, ಕಾಶಿನಾತರ ಸಿನೆಮಾಕ್ಕೆ ಕಾಯುವ ಮಂದಿಯ ಸಂಕೆಯೂ ಏರಿಕೆಯಾಗಿದ್ದು ನಿಜ. ಲೋ ಬಜೆಟ್  ಇದ್ದರೂ ಹಿಟ್  ಆಗುತ್ತಿದ್ದ ಕಾಶಿನಾತ್ ರ ಚಿತ್ರಗಳು, ದೊಡ್ಡ ನಟರ ಚಿತ್ರಗಳಿಗೆ ಸ್ಪರ‍್ದೆ ನೀಡುತ್ತಿದ್ದ ಕಾಲವೂ ಒಂದಿತ್ತು . ಆಮೇಲೆ, ಅವರ‌ ಚಿತ್ರಗಳು ಸೋತರೂ ಚಿತ್ರರಂಗದೊಂದಿಗೆ ಅವರ ಒಡನಾಟ ಕಡಿಮೆಯಾಗಲಿಲ್ಲ.

ಮುಂದೆ ತಮ್ಮ ಶಿಶ್ಯರನ್ನು ಪೋಶಿಸಿ ಬೆಳೆಸಿದ ಕಾಶಿನಾತ್ , ‘ಹಲೋ ಯಮ’ದ ಮೂಲಕ ಹಿಂತಿರುಗಿ ತಮ್ಮ ಸಾಮರ‍್ತ್ಯವನ್ನು ಮತ್ತೆ ಸಾಬೀತು ಮಾಡಿದರು. ಸುನೀಲ್ ಕುಮಾರ್ ದೇಸಾಯಿ, ಉಪೇಂದ್ರರಂತಹ ನಿರ‍್ದೇಶಕರನ್ನು ಬೆಳೆಸಿದ ಕಾಶಿನಾತ್ ಮತ್ತೆ ಹಿಂದಿರಿಗಿದ್ದು ‘ಚೌಕ’ ಚಿತ್ರದ ಮೂಲಕ. ‘ಚೌಕ’ ಚಿತ್ರದಲ್ಲಿನ ಅವರ ಮನೋಜ್ನ ಅಬಿನಯ, ಕಾಶಿನಾತರಲ್ಲಿದ್ದ ಅಬಿನಯ ಸಾಮರ‍್ತ್ಯ ವನ್ನು ಮತ್ತೊಮ್ಮೆ ಹೊರತಂದಿತ್ತು. ಒಳ್ಳೆಯದನ್ನು ಮನೋರಂಜನ ಮಾದ್ಯಮದ ಮೂಲಕ ಸುಲಬವಾಗಿ ತೋರಿಸಬಹುದು. ಆದರೆ ಹಿರಿಯ ನಟರ ಚಿತ್ರಗಳ ನಡುವೆ, ಸಮಾಜದ ಕೀಳುಮುಕಗಳನ್ನು ತಮ್ಮ ಚಿತ್ರಗಳ ಮುಕಾಂತರ ತೋರಿಸಿ, ತಮ್ಮ ಸಿನೆಮಾಗಳಿಂದ ಒಳ್ಳೆ ಸಂದೇಶಗಳನ್ನು ತಲುಪಿಸಿದ್ದು ನಟ, ನಿರ‍್ದೇಶಕ ಕಾಶಿನಾತ್.

ಎಶ್ಟೇ ಆದರೂ ಪ್ರತಿಬೆಯು ಮೈಬಣ್ಣ, ದೇಹ ಹಾಗು ಸೌಂದರ‍್ಯವನ್ನು ಮೀರಿದ್ದಲ್ಲವೇ?

( ಚಿತ್ರ ಸೆಲೆ: indiatoday.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: