ಗೆಣಸಿನ ಹೋಳಿಗೆ

– ಸವಿತಾ.

ಗೆಣಸಿನ ಹೋಳಿಗೆ, Sweet hOLige

ಕಣಕದ ಹಿಟ್ಟು ಮಾಡಲು ಬೇಕಾಗುವ ಪದಾರ‍್ತಗಳು:

 • 1 ಲೋಟ ಮೈದಾ ಹಿಟ್ಟು
 • 1/2 ಲೋಟ ಚಿರೋಟಿ ರವೆ
 • 2 ಟೀ ಚಮಚ ಕಾಯಿಸಿದ ಎಣ್ಣೆ
 • 1/4 ಚಮಚ ಉಪ್ಪು

ಹಿಟ್ಟು, ರವೆ, ಎಣ್ಣೆ, ಸ್ವಲ್ಪ ಉಪ್ಪು, ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ನಾದಿ, ಮೇಲೆ ಒಂದು ಬಟ್ಟೆ ಮುಚ್ಚಿ 2 ಗಂಟೆ ಇಡಿರಿ.

ಹೂರಣ ಮಾಡಲು ಬೇಕಾಗುವ ಪದಾರ‍್ತಗಳು:

 • 2 ಮದ್ಯಮ ಗಾತ್ರದ ಗೆಣಸು ಅತವಾ 1 ದೊಡ್ಡ ಗೆಣಸು
 • 1/2 ಲೋಟ ಬೆಲ್ಲದ ಪುಡಿ
 • 2 ಏಲಕ್ಕಿಯ ಪುಡಿ

ಮಾಡುವ ಬಗೆ:

 • ಗೆಣಸು ಕುದಿಸಿ ಸಿಪ್ಪೆ ತೆಗೆಯಿರಿ (ಕುಕರ್ ನಲ್ಲಿ ಆದರೆ 3 ಕೂಗು ಬರುವವರೆಗೆ ಕುದಿಸಿ)
 • ಬೆಲ್ಲದ ಪುಡಿ ಸಣ್ಣ ಉರಿಯಲ್ಲಿ ಇಟ್ಟು ಕರಗಿಸಿ (ನೀರು ಹಾಕಬೇಡಿ)
 • ನುರಿದ/ಕಿವು‍ಚಿದ ಗೆಣಸನ್ನು ಸೇರಿಸಿ, ಚೆನ್ನಾಗಿ ತಿರುಗಿಸಿ, ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಒಲೆ ಆರಿಸಿ ಕೆಳಗಿಳಿಸಿ
 • ಏಲಕ್ಕಿಯ ಪುಡಿ ಸೇರಿಸಿ ಆರಲು ಬಿಡಿ
 • ಕಣಕದ ಹಿಟ್ಟು ಇನೊಮ್ಮೆ ಚೆನ್ನಾಗಿ ನಾದಿಕೊಳ್ಳಿ 
 • ನಿಂಬೆಹಣ್ಣು ಗಾತ್ರದ ಅಳತೆಯಶ್ಟು ಹಿಟ್ಟು ತೆಗೆದುಕೊಂಡು, ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಚಪ್ಪಟೆಯಾಗಿ ಲಟ್ಟಿಸಿ
 • ಗೆಣಸಿನ ಹೂರಣ ತುಂಬಿ, ಎಣ್ಣೆ ಹಚ್ಚಿ ಮತ್ತೊಮ್ಮೆ ಲಟ್ಟಿಸಿರಿ
 • ತವೆ ಬಿಸಿ ಮಾಡಿ, ಸಣ್ಣ ಉರಿಯಲ್ಲಿ ಎರಡು ಬದಿ ಬೇಯಿಸಿ ತೆಗೆಯಿರಿ
 • ಗೆಣಸಿನ ಹೋಳಿಗೆಯನ್ನು ತುಪ್ಪದ ಜೊತೆ ಸವಿಯಿರಿ.

ಚಳಿಗಾಲದಲ್ಲಿ ಗೆಣಸು ಆರೋಗ್ಯಕ್ಕೆ ಒಳ್ಳೆಯದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: