ಬಾಡೂಟ: ಸುಟ್ಟ ಕುರಿ ತುಂಡು

– ಪ್ರೇಮ ಯಶವಂತ.

ಬೇಕಾಗಿರುವ ಅಡಕಗಳು

ಕುರಿ ತುಂಡು (Lamb chops)- 8 ತುಂಡುಗಳು
ಶುಂಟಿ ಬೆಳ್ಳುಳ್ಳಿ ಗೊಜ್ಜು – 1 ದೊಡ್ಡ ಚಮಚ
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/2 ಬಟ್ಟಲು
ಕಾರದ ಪುಡಿ – 1.5 ಚಮಚ ಅತವ ಕಾರಕ್ಕೆ ತಕ್ಕಶ್ಟು
ದನಿಯಾ ಪುಡಿ – 1/2 ಚಮಚ
ಕರಿಮೆಣಸಿನ ಪುಡಿ – 1/4 ಚಮಚ
ಜೀರಿಗೆ ಪುಡಿ – 1/4 ಚಮಚ
ನಿಂಬೆ ಹಣ್ಣಿನ ರಸ – 2 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಎಣ್ಣೆ – 2 ಚಮಚ

ಮಾಡುವ ಬಗೆ

ಒಂದು ಬಟ್ಟಲಿನಲ್ಲಿ ತೊಳೆದ ಕುರಿಯ ತುಂಡುಗಳು, ಕೊತ್ತಂಬರಿ ಸೊಪ್ಪು, ಶುಂಟಿ ಬೆಳ್ಳುಳ್ಳಿ ಗೊಜ್ಜು, ಕಾರದ ಪುಡಿ, ದನಿಯಾ ಪುಡಿ, ಕರಿಮೆಣಸಿನ ಪುಡಿ, ಜೀರಿಗೆ ಪುಡಿ, ನಿಂಬೆ ಹಣ್ಣಿನ ರಸ, ಎಣ್ಣೆ ಮತ್ತು ಉಪ್ಪು ಬೆರಸಿ 1 ಗಂಟೆ ಇಡಿ.

ನಿಮ್ಮ ಒಲೆಯನ್ನು(conventional oven) 450 ಡಿಗ್ರಿಗೆ ಮುಂಬಿಸಿ (pre-heat) ಮಾಡಿಕೊಳ್ಳಿ. ಒಲೆಯಲ್ಲಿ ಇಡಬಹುದಾದಂತಹ ಒಂದು ತಟ್ಟೆಗೆ ಎಣ್ಣೆ ಸವರಿ, ಮಸಾಲೆ ಬೆರೆಸಿಟ್ಟ ಕುರಿತುಂಡುಗಳನ್ನು ಸಾಲಾಗಿ ಜೋಡಿಸಿ ಒಲೆಗೆ ಇಡಿ. 30-40 ನಿಮಿಶ ಬೇಯಿಸಿದರೆ ಕುರಿ ತುಂಡುಗಳು ಸವಿಯಲು ಅಣಿಯಾಗುವುದು. ಬಿಸಿ ಬಿಸಿ ತಿನ್ನಲು ತುಂಬಾ ರುಚಿಯಾಗಿರುತ್ತೆ. ಕನ್ವೆನ್ಶನಲ್ ಒಲೆ ಇಲ್ಲದವರು ತಂದೂರಿ ಮಾಡುವ ಒಲೆಯನ್ನು ಕೂಡ ಬಳಸಿ ಈ ಅಡುಗೆಯನ್ನು ಮಾಡಬಹುದು.

(ಚಿತ್ರ ಸೆಲೆಪ್ರೇಮ ಯಶವಂತ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: