ಸಿಹಿ ಪ್ರಿಯರಿಗೆ ಇಲ್ಲಿದೆ ಚಾಕೊಲೇಟ್ ಕೇಕ್

– ಪ್ರೇಮ ಯಶವಂತ.

ಚಾಕೊಲೇಟ್ ಕೇಕ್

ಕೇಕ್ ಮಾಡಲು ಬೇಕಾಗುವ ಅಡಕಗಳು

ಗೋದಿ ಹಿಟ್ಟು/ಹಲಕಾಳುಗಳ(multi-grain) ಹಿಟ್ಟು – 1 3/4 ಬಟ್ಟಲು
ಸಕ್ಕರೆ – 1 1/2 ಬಟ್ಟಲು
ಕೊಕೊ ಪುಡಿ – 3/4 ಬಟ್ಟಲು
ಅಡುಗೆ ಸೋಡ – 2 ಚಮಚ
ಉಪ್ಪು – 1/2 ಚಮಚ
ಮಜ್ಜಿಗೆ – 1 ಬಟ್ಟಲು (ಮಜ್ಜಿಗೆ ಮಾಡುವ ಬಗೆ – ಒಂದು ಬಟ್ಟಲು ತಣ್ಣನೆ ಹಾಲಿಗೆ ನಿಂಬೆ ರಸ ಹಿಂಡಿ 10 ನಿಮಿಶ ಬಿಟ್ಟು ಚೆನ್ನಾಗಿ ಕಲಕಿರಿ.)
ಬಿಸಿ ಬಿಸಿಯಾಗಿ ಮಾಡಿದ ಕಪ್ಪು ಕಾಪಿ – 1 ಬಟ್ಟಲು
ಅಡುಗೆ ಎಣ್ಣೆ – 1/2 ಬಟ್ಟಲು
ಹರಿಗೆ ಇಳಿಸಿದ ವೆನಿಲ್ಲಾ (vanilla extract)- 2 ಚಮಚ
ಮೊಟ್ಟೆ – 2
ಚೆರಿ ರಸ (canned cherry) – 1/2 ಬಟ್ಟಲು

ಚಾಕೊಲೇಟ್ ಹಚ್ಚಿಕೆಗೆ ಬೇಕಾಗುವ ಅಡಕಗಳು

ಬೆಣ್ಣೆ – 1/2 ಬಟ್ಟಲು
ಕ್ರೀಮ್ ಚೀಸ್ – 1/2 ಬಟ್ಟಲು
ಮೊಟ್ಟೆ – 1
ಸಕ್ಕರೆ – 3/4 ಬಟ್ಟಲು ಇಲ್ಲವೇ ಸಿಹಿಗೆ ಬೇಕಾದಶ್ಟು
ಕೊಕೊ ಪುಡಿ ಅತವ ಇನ್‍ಸ್ಟಂಟ್ ಕಾಪಿಪುಡಿ – 1 ದೊಡ್ಡ ಚಮಚ
ಹರಿಗೆ ಇಳಿಸಿದ ವೆನಿಲ್ಲಾ (vanilla extract)- 1 ಚಮಚ

ಕೇಕ್ ಮಾಡುವ ಬಗೆ

ಕೇಕ್ ಮಾಡುವ ಒಲೆಯನ್ನು(conventional oven) 350 ಡಿಗ್ರಿಗೆ ಮುಂಬಿಸಿ(pre-heat) ಮಾಡಿಕೊಳ್ಳಿ‌. ಕೇಕ್ ತಟ್ಟೆಗೆ ಬೆಣ್ಣೆ ಅತವ ಎಣ್ಣೆ ಸವರಿ. ಗೋದಿಹಿಟ್ಟು, ಸಕ್ಕರೆ, ಅಡುಗೆ ಸೋಡ, ಉಪ್ಪು, ಕೊಕೊಪುಡಿ ಎಲ್ಲವನ್ನೂ ಜರಡಿ ಹಿಡಿದು ಎಲೆಕ್ಟ್ರಿಕ್ ಮಿಕ್ಸರ್‍ಗೆ ಹಾಕಿ. ಇನ್ನೊಂದು ಬಟ್ಟಲಲ್ಲಿ ಎಣ್ಣೆ, ಮೊಟ್ಟೆ, ವೆನಿಲ್ಲಾ, ಮಜ್ಜಿಗೆ ಇವೆಲ್ಲವನ್ನೂ ಚೆನ್ನಾಗಿ ಕಲಸಿ ಮಿಕ್ಸರ್‍ಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಕೊನೆಯದಾಗಿ ಬಿಸಿ ಕಾಪಿಯನ್ನು ಸೇರಿಸಿ, ಸವರಿಟ್ಟ ಕೇಕ್ ತಟ್ಟೆಗೆ ಹಾಕಿ. ಕೇಕ್ ತಟ್ಟೆಯನ್ನು ಒಲೆಗೆ ಇಟ್ಟು 30-40 ನಿಮಿಶ ಇಲ್ಲವೇ ಕೇಕ್ ಬೇಯುವವರೆಗೂ ಇಡಿ.

ಚಾಕೊಲೇಟ್ ಹಚ್ಚಿಕೆ ಮಾಡುವ ಬಗೆ

ಹಚ್ಚಿಕೆಗೆ ತಿಳಿಸಿರುವ ಅಡಕಗಳನ್ನೆಲ್ಲ ಎಲೆಕ್ಟ್ರಿಕ್ ಮಿಕ್ಸರ್ ಗೆ ಹಾಕಿ ಹದ ಬರುವವರೆಗೂ ರುಬ್ಬಿಕೊಳ್ಳಿ.

ಅಣಿಯಾದ ಕೇಕನ್ನು‌ ಒಲೆಯಿಂದ ಇಳಿಸಿಕೊಂಡು, ಅಡ್ಡವಾಗಿ ಎರಡು ಪದರಗಳಾಗಿ ಕತ್ತರಿಸಿ. 1/4 ಬಟ್ಟಲಶ್ಟು ಚೆರಿ ರಸವನ್ನು ಕತ್ತರಿಸಿದ ಒಂದು ಕೇಕ್ ಪದರದ ಮೇಲೆ ಹಾಕಿ. ಬಳಿಕ ಕಲಸಿಟ್ಟುಕೊಂಡ ಚಾಕೊಲೇಟ್ ಹಚ್ಚಿಕೆಯನ್ನು ಇದರ ಮೇಲೆ ಸವರಿ. ಸ್ವಲ್ಪ ಚೆರಿ ಹಣ್ಣುಗಳನ್ನೂ ಕತ್ತರಿಸಿ ಹಾಕಬಹುದು. ಇನ್ನೊಂದು ಕೇಕ್‍ನ ಪದರವನ್ನು ಇದರ ಮೇಲಿರಿಸಿ ಉಳಿದಿರುವ ಚೆರಿ ರಸವನ್ನು ಹಾಕಿ, ಚಾಕೊಲೇಟ್ ಹಚ್ಚಿಕೆಯನ್ನು ಸವರಿ. ಅಲ್ಲಿಗೆ ಚಾಕೊಲೇಟ್ ಕೇಕ್ ಸವಿಯಲು ಅಣಿಯಾಗುತ್ತದೆ.

(ಚಿತ್ರ ಸೆಲೆ: ಪ್ರೇಮ ಯಶವಂತ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: