ತುಪ್ಪದ ಅವಲಕ್ಕಿ

– ಸವಿತಾ.

ತುಪ್ಪದ ಅವಲಕ್ಕಿ, Tuppada Avalakki, Ghee Avalakki

ಏನೇನು ಬೇಕು?

  • ತೆಳು ಅವಲಕ್ಕಿ – 3 ಬಟ್ಟಲು
  • ಈರುಳ್ಳಿ – 1
  • ಹಸಿ ಮೆಣಸಿನಕಾಯಿ – 3
  • ತುಪ್ಪ – 3 ಚಮಚ
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಹಸಿ ಕೊಬ್ಬರಿ ತುರಿ – 1/2 ಬಟ್ಟಲು
  • 1/2 ಹೋಳು ನಿಂಬೆ ರಸ
  • ಸಕ್ಕರೆ – ರುಚಿಗೆ ತಕ್ಕಶ್ಟು
  • ಉಪ್ಪು – ರುಚಿಗೆ ತಕ್ಕಶ್ಟು
  • ಕೊತ್ತಂಬರಿ ಸೊಪ್ಪು
  • ಕರಿಬೇವು
  • ಇಂಗು – ಸ್ವಲ್ಪ

ಮಾಡುವ ಬಗೆ

  • ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ.
  • ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ.
  • ನಂತರ ಅವಲಕ್ಕಿ ಸೇರಿಸಿ ಕಲಸಿಕೊಳ್ಳಿ.
  • ಕತ್ತರಿಸಿದ ಈರುಳ್ಳಿ, ಉಪ್ಪು, ಸಕ್ಕರೆ, ನಿಂಬೆ ರಸ, ಹಸಿ ಕೊಬ್ಬರಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿರಿ.
  • ಈಗ ತುಪ್ಪದ ಅವಲಕ್ಕಿ ಸವಿಯಲು ಸಿದ್ದ.

ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ. ನಿಮಗೆ ಬೇಕಾದಲ್ಲಿ  ಸಣ್ಣನೆಯ ಸೇವು ಕೂಡ ಹಾಕಿಕೊಳ್ಳಬಹುದು. ಮೊಸರು ಹಾಕಿಕೊಂಡೂ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: