ಹೋದವನು ಹೋದ

– ಸುರಬಿ ಲತಾ.

ಹೋದವನು ಹೋದ ಮರೆಯಲಾರದ
ಬಹುಮಾನ ಕೊಟ್ಟು ಹೋದ

ನೀನೇ ಉಸಿರೆಂದ, ನೀನೇ ಹಸಿರೆಂದ
ಮರೆಯಲಾರದ ಒಲವ ಕೊಟ್ಟ

ಜೀವಕ್ಕೆ ಜೀವ ಬೆರೆಸಿದ
ಕಾಣದ ಲೋಕವ ತೋರಿದ

ಬುವಿಯಲ್ಲೇ ಸ್ವರ‍್ಗ ತೋರಿದ
ತನ್ನತನವ ಅರ‍್ತೈಸಿದ

ಹೋದವನು ಹೋದ ಮರೆಯಲಾಗದ
ಬಹುಮಾನ ಕೊಟ್ಟು ಹೋದ

ಆಸೆಯ ಅರಮನೆಯಲ್ಲಿ
ಬಾಶೆಯ ಮಣಿ ಪೋಣಿಸಿದ

ಬಾಳ ಹಾದಿಯ ಬವಣೆ ತಿಳಿಸಿದ
ಚಲವ ಬಿಡದ ನಡೆಯ ಕಲಿಸಿದ

ಅವ ನುಡಿದಂತೆ ನಾ ನಡೆದೆ
ಎಲ್ಲದರಲಿ ವಿಜಯ ಸಾದಿಸಿದೆ

ತಿರುಗಿ ನೋಡಲು ಆ ಗುರು-ದೈವವ
ಕಾಣದೆ ಕಣ್ಣೀರಾಗಿ ಹೋದ

ಅವನ ನೆನಪು ಉಳಿಸಿ ಹೋದ
ಬಾರದ ಲೋಕಕೆ ಒಂಟಿಯಾಗಿ ಪಯಣಿಸಿದ

ಹೋದವನು ಹೋದ ಮರೆಯಲಾರದ
ಬಹುಮಾನ ಕೊಟ್ಟು ಹೋದ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: