ಶೇಂಗಾ ಹೋಳಿಗೆ

–  ಸವಿತಾ.

ಶೇಂಗಾ ಹೋಳಿಗೆ, Shenga Holige

ಏನೇನು ಬೇಕು?

  • 2 ಲೋಟ ಶೇಂಗಾ (ಕಡಲೇ ಬೀಜ)
  • 2 ಲೋಟ ಗೋದಿ ಹಿಟ್ಟು
  • 2 ಚಮಚ ಮೈದಾ ಹಿಟ್ಟು
  • 1 ಲೋಟ ಬೆಲ್ಲ
  • 1 ಚಮಚ ಗಸಗಸೆ
  • 4 ಏಲಕ್ಕಿ

ಮಾಡುವ ಬಗೆ

  • ಗೋದಿ ಹಿಟ್ಟು, ಮೈದಾ ಹಿಟ್ಟು ಮತ್ತು ಎಣ್ಣೆ ಒಂದು ಚಮಚ ಕಾಯಿಸಿ ಹಾಕಿ, ನೀರು ಬೆರೆಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಒಂದು ಗಂಟೆ ಸಮಯ ಹಾಗೇ ಇಡಿ.
  • ಶೇಂಗಾ ಹುರಿದು ಬೇಳೆ ಮಾಡಿ, ಅದನ್ನು ಮಿಕ್ಸರ್ ನಲ್ಲಿ ನುಣ್ಣಗೆ ಪುಡಿ ಮಾಡಿ.
  • ಒಲೆಯನ್ನು ಸಣ್ಣ ಉರಿಯಲ್ಲಿ ಇಟ್ಟು , ಬೆಲ್ಲ ಕರಗಿಸಿ, ಬಳಿಕ ಒಲೆ ಆರಿಸಿ.
  • ಕರಗಿದ ಬೆಲ್ಲಕ್ಕೆ, ಶೇಂಗಾ ಪುಡಿ ಹಾಕಿ ಮತ್ತು ಏಲಕ್ಕಿಯನ್ನು ಪುಡಿ ಮಾಡಿ ಹಾಕಿ.
  • ಗಸಗಸೆಯನ್ನು ಹಾಗೇ ಹಾಕಿ ಚೆನ್ನಾಗಿ ಕಲಸಿ ನಿಂಬೆ ಹಣ್ಣು ಗಾತ್ರದ ಉಂಡೆ ಕಟ್ಟಿ ಇಟ್ಟಿರಿ
  • ಅಶ್ಟೇ ಕಣಕದ ಹಿಟ್ಟು ಹಿಡಿದು ಸ್ವಲ್ಪ ಲಟ್ಟಿಸಿ ಶೇಂಗಾ ಹೂರಣ ತುಂಬಿ
  • ಕೈಗೆ ಎಣ್ಣೆ ಹಚ್ಚಿಕೊಂಡು ಕಣಕ ಮತ್ತು ಶೇಂಗಾ ಹೂರಣವನ್ನು ಮೆಲ್ಲಗೆ ತಟ್ಟುತ್ತಾ ದೊಡ್ಡದು ಮಾಡಿ/ಲಟ್ಟಿಸಿರಿ.
  • ಬಿಸಿ ತವೆಯ ಮೇಲೆ, ಸ್ವಲ್ಪ ಎಣ್ಣೆ ಹಚ್ಚಿ ಎರಡೂ ಬದಿ ಬೇಯಿಸಿರಿ.
  • ಶೇಂಗಾ ಹೋಳಿಗೆ ಈಗ ಸವಿಯಲು ಸಿದ್ದ.

ಶೇಂಗಾ ಹೋಳಿಗೆಯನ್ನು ತುಪ್ಪದ ಜೊತೆ ತಿನ್ನಲು ಕೊಡಿ. ಈ ಹೋಳಿಗೆಯನ್ನು ಎರಡು ವಾರ ಇಟ್ಟು ಕೂಡ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: