ಮಕ್ಕಳ ಕವಿತೆ: ಚುಕ್ಕೆಗಳೊಂದಿಗೆ ಗೆಳೆತನ

– ಚಂದ್ರಗೌಡ ಕುಲಕರ‍್ಣಿ.

ಚುಕ್ಕೆ, ನಕ್ಶತ್ರ, ಮಕ್ಕಳ ಕವಿತೆ, children's poem, stars, school

ಚುಕ್ಕೆಗಳೆಲ್ಲ ನೆಲಕೆ ಇಳಿದು
ಗೆಳೆಯರಾಗಿ ಬಿಟ್ರೆ
ಕತ್ತಲೆ ಹೆದರಿಕೆ ಇಲ್ಲವೆ ಇಲ್ಲ
ಕರೆಂಟು ಕೈ ಕೊಟ್ರೆ

ನಮ್ಮ ಜೊತೆಯಲಿ ದಿನವೂ ಬರಲಿ
ಶಾಲೆಯ ಯುನಿಪಾರ‍್ಮ ತೊಟ್ಟು
ಮನೆಮನೆಯಲ್ಲಿ ಉಳಿಸ್ಕೊತೀವಿ
ಪ್ರೀತಿ ಗೌರವ ಕೊಟ್ಟು

ಬೆನ್ನಿಗೆ ಬಾರದ ಚೀಲವ ಹೊತ್ತು
ಅರಿಯಲಿ ನಮ್ಮ ಕಶ್ಟ
ಕೂಡಿ ಆಡುತ ತೊರೆಯಲಿ ತಮ್ಮ
ತಾರಾಲೋಕದ ಪಟ್ಟ

ಶಾಲೆ ಮಕ್ಕಳ ಸಾಲಲಿ ನಿಂತು
ಮಾಡಲಿ ಮದ್ಯಾಹ್ನ ಊಟ
ಒರಟು ಕಲ್ಲಿನ ನೆಲದಲಿ ಕೂತು
ಕೇಳಲಿ ಮಾಸ್ತರ ಪಾಟ

ವಾರ‍್ಶಿಕ ಪರೀಕ್ಶೆಯಲ್ಲಿ ಕೂತು
ಗಳಿಸಲಿ ಹೆಚ್ಚಿನ ಅಂಕ
ಸ್ಪರ‍್ದೆಯಿಂದ ಕಸಿದುಕೊಳ್ಳಲಿ
ಗೆಳೆಯರ ಮೊದಲನೆ ರ‍್ಯಾಂಕ

(ಚಿತ್ರ ಸೆಲೆ: ytimg.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. prakash sv says:

    ನನ್ನ ಮಗನಿಗೆ ತುಂಬ ಇಷ್ಟವಾಯ್ತು.

ಅನಿಸಿಕೆ ಬರೆಯಿರಿ:

Enable Notifications OK No thanks