ನಿನ್ನ ನೋಡಲು ಮನಸು ಕಾದಿದೆ

– ಈಶ್ವರ ಹಡಪದ.

ನಿನ್ನ ಕಿರುಸಂಬಾಶಣೆಗೆ
ಅಶರೀರ ವಾಣಿಯೊಂದು
ನನ್ನ ಹ್ರುದಯಕೆ ಸಂಜೀವಿನಿ ನೀನೇಯೆಂದು
ಸಾರಿತು ಹ್ರುದಯದಲ್ಲಿಂದು

ಚಾಣಕ್ಯನ ತಂತ್ರವ ಹೆಣೆದು
ನಿನ್ನ ಸೆರೆಹಿಡಿಯಲು ಕಾದಿದೆ ಮನಸಿಂದು
ನಿನ್ನ ನೋಡುವ ಚಟದಲ್ಲಿ
ನೆಪವಿಲ್ಲದ ನೆಪವೊಂದು

ಹೇಳಲು ಕಾದುಕುಳಿತಿರುವೆ
ತಡಮಾಡದೆ ಬಂದು ನೀ
ಕೇಳು ನೀ… ಕೇಳು ನೀ…

ಮರೆತೋಗಿದೆ ನನ್ನ ಮನ
ತನ್ನ ಗುರುತನ್ನೇ
ನಿನ್ನ ಪರಿಶೋದನೆಯಲಿ

ದಾರಿಯಲಿ ನಾ ಎಡವಿಬಿದ್ದ ಕಲ್ಲಿಗೂ
ವಿವರಿಸಿ ಹೇಳಿರುವೆ
ನಿನ್ನ ಪ್ರೀತಿಯನ್ನೇ

ನನ್ನ ಸುತ್ತ ಪರಿಸರಕ್ಕೆ
ಒಲವಿನ ವಾತಾವರಣ ನಿನ್ನದೇ
ನನ ಹ್ರುದಯದ ಬಡಿತವ
ತಪ್ಪಿಸಿದ ನಿನ್ನನೊಮ್ಮೆ
ನೋಡಲು ಮನಸು ಕಾದಿದೆ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: