ಕಾನನದೊಡಲಲಿ ಕಲರವ

– ಚಂದ್ರಗೌಡ ಕುಲಕರ‍್ಣಿ.

ಅಕ್ಶರ ಪದವನು
ಹದದಲಿ ಬೆರೆಸಿದ
ಪುಸ್ತಕ ರತ್ನದ ಹರಳು
ಪ್ರಕ್ರುತಿ ವಿಸ್ಮಯ
ಅನಂತ ಅನುಬವ
ನುಡಿಯುವ ಚಂದದ ಕೊರಳು

ಬಣ್ಣದ ಹೂವು
ಪರಿಮಳ ತುಂಬಿದ
ಮದುರ ಜೇನಿನ ಗೂಡು
ಗಿಡಗಂಟಿಗಳ
ಕೊರಳಿಂದುಲಿಯುವ
ಚಿಲಿಪಿಲಿ ಹಕ್ಕಿಯ ಹಾಡು

ಕಾನನದೊಡಲಲಿ
ಕಲರವಗೈಯುತ
ಹರಿಯುವ ತಿಳಿ ತಿಳಿ ಹೊನಲು
ಮಿಣ ಮಿಣ ಮಿನುಗುತ
ಕಣ್ಣನು ಪಿಳುಕಿಸಿ
ನಲಿಯುವ ಚುಕ್ಕೆಯ ಸಾಲು

ಮೋಡದ ಗುಡುಗಿಗೆ
ನ್ರುತ್ಯವ ಮಾಡುವ
ನವಿಲಿನ ಗರಿಗಳ ಕಣ್ಣು
ವಸಂತ ಕಾಲದಿ
ಸವಿಯನು ಹಂಚುವ
ಸಿಹಿ ಸಿಹಿ ಮಾವಿನ ಹಣ್ಣು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: