ಬೇಸಿಗೆ

– .

( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ )

ಚೆಂಗದಿರನು ಕೆಂಡವಾಗಿ
ಕುಳಿರ‍್ಗಾಳಿ ಬೆಚ್ಚಗಾಗಿ
ಮೆಲ್ನಡೆಯಲಿ ಬಂದಿತು ಬೇಸಿಗೆಯು

ಎಲೆಕಾಯಿಗಳುದುರೋಗಿ
ಹಣ್ಣರಸನು ಬಲು ಮಾಗಿ
ಮೆಲ್ಲನೆ ಬಂದಿತು ಬೇಸಿಗೆಯು

ಮಂಜೆಲ್ಲ ನೀರಾಗಲು
ನೀರೆಲ್ಲ ಸುಡುತಿರಲು
ಅರೆ ಬಾಳಿ ಅರೆಸತ್ತಂತಿಹ ಮರಗಳು

ಏಡೇಡಿಗೆಚ್ಚು ಬಿಸಿಲು
ಮರಗಳಿಲ್ಲದೆಲ್ಲಿಯ ನೆಳಲು
ಒಣದನಿಯಲಿ ಹೊಮ್ಮಿಹ ಸ್ವರಗಳು

ಮೊಬ್ಬೇಸಿಗೆಯಲಿ
ಮುಬ್ಬೇಸಿಗೆಯ ಅನುಬವ
ತಡೆಯಲಾದೀತೆ
ಹಸುಳೆಗೀ ನೇಸರನ ಕಾವ

ಉಸುರಿಗಳು ಕೇಳಿದವು
‘ಕರುಣೆಯಿಲ್ಲವಾ ನಿನಗೆ’
ನೇಸರನೇಳಿದನು
‘ಅದ ನಾ ಕೇಳಬೇಕು ನಿನಗೆ’

ಉಸುರಿಗಳು ಬೇಡಿದವು
‘ಇನ್ನು ಸುಡದಿರೆಂದು’
ಬದಿಲನಿತ್ತ ನೇಸರನು
‘ಮರವ ನೆಡಿರೆಂದು’

(ಹಣ್ಣರಸ = ಮಾವು; ನೆಳಲು = ನೆರಳು; ಮೊಬ್ಬೇಸಿಗೆ =ಮಾರ‍್ಚ್ ತಿಂಗಳು; ಮುಬ್ಬೇಸಿಗೆ = ಮೇ ತಿಂಗಳು; ಕಾವು = ಬಿಸಿ, ಸೆಕೆ)

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sandeep says:

    ತುಂಬಾ ಚೆನ್ನಾಗಿದೆ… ??

ಅನಿಸಿಕೆ ಬರೆಯಿರಿ: