ತುಂಬಿದ ಡೊಣ್ಣಮೆಣಸಿನಕಾಯಿ ಪಲ್ಯ!

– ಕಲ್ಪನಾ ಹೆಗಡೆ.

ಡೊಣ್ಣಮೆಣಸಿನಕಾಯಿ ತುಂಬಿದ ಪಲ್ಯ, Stuffed Capsicum

ಏನೇನು ಬೇಕು?

  • 10 ಚಿಕ್ಕ ಡೊಣ್ಣಮೆಣಸಿನಕಾಯಿ
  • 4 ಚಮಚ ಕಡ್ಲೆಬೇಳೆ
  • 4 ಚಮಚ ಉದ್ದಿನಬೇಳೆ
  • ಇಂಗು
  • ಅರ‍್ದ ಹೋಳು ಕಾಯಿತುರಿ
  • 5 ಒಣಮೆಣಸಿನಕಾಯಿ
  • 1 ಚಮಚ ಎಳ್ಳು
  • ಕಾಲು ಚಮಚ ಹುಣಸೆಹಣ್ಣಿನ ರಸ
  • ಕರಿಬೇವು
  • ಎಣ್ಣೆ

ಮಾಡುವ ಬಗೆ :

  • ಮೊದಲು ಡೊಣ್ಣಮೆಣಸಿನಕಾಯಿಯನ್ನು ತೊಳೆದು, ತೊಟ್ಟನ್ನು ತೆಗೆದು, ಒಳಗಿರುವ ಬೀಜವನ್ನು ತೆಗೆದುಬಿಡಿ.
  • ಕಡ್ಲೆಬೇಳೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಹುರಿದು, ಕಾಯಿತುರಿ, ರುಚಿಗೆ ತಕ್ಕಶ್ಟು ಉಪ್ಪು ಹುಣಸೆ ಹಣ್ಣಿನ ರಸ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಜಾಸ್ತಿ ನೀರು ಹಾಕದೆ ಸ್ವಲ್ಪ ಕಡಿ ಕಡಿಯಾಗಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
  • ರುಬ್ಬಿದ ಕಲಕವನ್ನು (ಮಸಾಲೆಯನ್ನು) ಡೊಣ್ಣಮೆಣಸಿನಕಾಯಿಯ ತೊಟ್ಟು ತೆಗೆದ ಬಾಗದಲ್ಲಿ ತುಂಬಿ
  • ಬಾಣಲೆಯಲ್ಲಿ ಎಣ್ಣೆ ಹಾಕಿ, ಸಣ್ಣ ಉರಿಯಲ್ಲಿ ಮಸಾಲೆ ತುಂಬಿದ ಡೊಣ್ಣಮೆಣಸಿನಕಾಯಿಯನ್ನು ಚೆನ್ನಾಗಿ ಬೇಯಿಸಿ.

ತುಂಬಿದ ಡೊಣ್ಣಮೆಣಸಿನಕಾಯಿ ಪಲ್ಯವನ್ನು ಅನ್ನದೊಂದಿಗೆ ಸವಿಯಲು ನೀಡಿ. ಚಪಾತಿ ಜೊತೆಗೂ ನಂಜಿಕೊಳ್ಳಲು ಚೆನ್ನಾಗಿರತ್ತೆ. ಅದರಲ್ಲೂ ಅನ್ನದ ಜೊತೆಗೆ ಸವಿಯಲು ತುಂಬಾ ಚೆನ್ನಾಗಿರತ್ತೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Ganesh Mayya says:

    ?

ಅನಿಸಿಕೆ ಬರೆಯಿರಿ: